ಮಡಿಕೇರಿ: ಮೊಬೈಲ್ ವಿಚಾರದಲ್ಲಿ ಜಗಳ: ಮನೆ ಬಿಟ್ಟು ತೆರಳಿದ್ದ ಯುವತಿಯ ಮೃತದೇಹ ಪತ್ತೆ
ಮಡಿಕೇರಿ: ಮೊಬೈಲ್ ವಿಚಾರದಲ್ಲಿ ಸಹೋದರನೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ತೆರಳಿದ್ದ ಯುವತಿಯ ಮೃತದೇಹ ಎರಡು ದಿನಗಳ ನಂತರ ಕಾವೇರಿ ನದಿಯಲ್ಲಿ ಪತ್ತೆಯಾದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಕುಶಾಲನಗರದ ಆದಿಶಂಕರಾಚಾರ್ಯ ಬಡಾವಣೆ ನಿವಾಸಿ ರಣಜಿತ್ ಸಿಂಗ್ ಅವರ ದ್ವಿತೀಯ ಪುತ್ರಿ ಭಾವನ (19) ಮೃತಪಟ್ಟ ಯುವತಿ.
10ನೇ ತರಗತಿ ಮುಗಿಸಿ ಮನೆಯಲ್ಲಿದ್ದ ಭಾವನ ಬಿಡುವಿನ ವೇಳೆಯಲ್ಲಿ ರಥಬೀದಿಯಲ್ಲಿರುವ ತಂದೆಯ ಫ್ಯಾನ್ಸಿ ಸ್ಟೋರ್‌ನಲ್ಲಿ ನೆರವಾಗುತ್ತಿದ್ದಳು. ಡಿ.8 ರಂದು ಮೊಬೈಲ್ ವಿಚಾರವಾಗಿ ಭಾವನ ಹಾಗೂ ಆಕೆಯ ತಮ್ಮ ಮಹಿಪಾಲ್ ನಡುವೆ ಅಂಗಡಿಯಲ್ಲಿ ಜಗಳವಾಗಿದೆ.
ಈ ಸಂದರ್ಭ ನಾಳೆ ಬರುವುದಾಗಿ ತಿಳಿಸಿ ಭಾನುವಾರ ಅಂಗಡಿಯಿಂದ ಸಂಜೆ ಹೊರ ತೆರಳಿದ ಭಾವನ ಕಾಣೆಯಾಗಿರುವುದಾಗಿ ತಂದೆ ರಣಜಿತ್ ಸಿಂಗ್ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ಸೋಮವಾರ ದೂರು ಸಲ್ಲಿಸಿದ್ದರು.