December 13, 2024

ಮಂಗಳೂರು: ಸರಗಳ್ಳತನ ಇಬ್ಬರು ಆರೋಪಿಗಳ ಬಂಧನ

0

ಮಂಗಳೂರು: ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ನಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಸರಕಳ್ಳರಿಬ್ಬರನ್ನು ಕೃತ್ಯ ನಡೆದ 24 ಗಂಟೆ ಒಳಗಡೆ ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ಚಿನ್ನದ ಸರ ಹಾಗೂ ಕಳವುಗೈದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಕೃಷ್ಣಾಪುರ ಮೂಲದ ಹಬೀಬ್ ಹಸನ್ ಯಾನೆ ಚೊಂಬುಗುಡ್ಡೆ ಹಬೀಬ್ ಯಾನೆ ಅಬ್ಬಿ (43) ಮತ್ತು ಬಂಟ್ವಾಳ ತಾಲೂಕಿನ ಪರ್ಲಿಯಾ ನಿವಾಸಿ ಉಮ್ಮರ್ ಶಿಯಾಫ್ (29 ) ಎಂದು ಗುರುತಿಸಲಾಗಿದೆ.

ಡಿಸೆಂಬರ್ 6 ರಂದು ನರಿಂಗಾನ ಗ್ರಾಮದ ತೌಡುಗೋಳಿ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದ ಸುಜಿನಾ ಡಿಸೊಜಾ ಅವರು ಅಂಗನವಾಡಿಯಲ್ಲಿ ಕೆಲಸದಲ್ಲಿರುವ ಸಮಯ ಮಧ್ಯಾಹ್ನ 1.15 ಗಂಟೆ ಸುಮಾರಿಗೆ ಇಬ್ಬರು ಬೈಕಿನಲ್ಲಿ ಅಂಗನವಾಡಿಗೆ ಬಂದು, ಬೈಕಿನಿಂದ ಇಳಿದು ಮಂಜನಾಡಿಗೆ ಹೋಗುವ ದಾರಿಯ ಬಗ್ಗೆ ವಿಚಾರಿಸಿದ್ದರು. ಸುಜಿನಾ ಅವರು ಮಂಜನಾಡಿಗೆ ಹೋಗುವ ದಾರಿಯನ್ನು ಹೇಳಿ, ಅಂಗನವಾಡಿಯ ಬಾಗಿಲನ್ನು ಹಾಕುವಷ್ಟರಲ್ಲಿ ಬಾಗಿಲನ್ನು ದೂಡಿ ಅಂಗನವಾಡಿಯ ಒಳಗೆ ಪ್ರವೇಶಿಸಿ, ಸುಜಿನಾರವರ ಕುತ್ತಿಗೆಯ ಚಿನ್ನದ ಸರವನ್ನು ಸುಲಿಗೆ ಮಾಡಿ ಆರೋಪಿಗಳು ಬೈಕ್ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

 

Leave a Reply

Your email address will not be published. Required fields are marked *

error: Content is protected !!