ವಿಟ್ಲ; ಮದರ್ ಇಂಡಿಯಾ ಪ್ರೀಮಿಯಂ ಲೀಗ್ ವತಿಯಿಂದ ಕ್ರಿಕೆಟ್ ಪಂದ್ಯಾಟ
ವಿಟ್ಲ: ವಿಟ್ಲದ ಮದರ್ ಇಂಡಿಯಾ ಪ್ರೀಮಿಯರ್ ಲೀಗ್ ವತಿಯಿಂದ ಸೀಮಿತ ನಾಲ್ಕು ಓವರ್ ಗಳ ಕ್ರಿಕೆಟ್ ಪಂದ್ಯಾಟವು ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.
ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ರವಿಪ್ರಕಾಶ್ ಉದ್ಘಾಟಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ .ಮಹಮ್ಮದ್ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಅಝೀಝ್ ಸನ, ಸಾಮಾಜಿಕ ಮುಖಂಡರಾದ ಶಾಕಿರ್ ಅಳಕೆಮಜಲು, ಖಲಂದರ್ ಪರ್ತಿಪಾಡಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ವಿಟ್ಲ ಪಟ್ಟಣ ಪಂಚಾಯತ್ ವಿರೋಧ ಪಕ್ಷದ ನಾಯಕ ವಿ.ಕೆ.ಎಂ.ಅಶ್ರಫ್, ಯೂತ್ ವಿಂಗ್ ಅಧ್ಯಕ್ಷ ರಫೀಕ್ ಪೊನ್ನೋಟು, ಉಕ್ಕುಡ ಮಸೀದಿ ಅಧ್ಯಕ್ಷ ಟಿಎಚ್‌ಎಂ.ಎ.ಅಬ್ಬಾಸ್, ಅಝೀಝ್ ಹರಿಯಮೂಲೆ, ಅಬ್ದುಲ್ ರಹಿಮಾನ್ ದೀಪಕ್, ಇಸಾಕ್ ವಿಟ್ಲ, ಸಫ್ವಾನ್ ಕರ್ನಾಟಕ, ಅಕ್ಬರ್ ಅಲಿ ಮೇಗಿನಪೇಟೆ, ವಿ.ಕೆ.ಎಂ ಹಂಝ ಮುಖ್ಯ ಅತಿಥಿಗಳಾಗಿದ್ದರು.
ಡಿ’ ಗ್ರೂಪ್ ಶೈನ್ ಎಟೇಕಾರ್ಸ್ ಚಾಂಪಿಯನ್ ಟ್ರೋಫಿ ಪಡೆಯಿತು, ಉತ್ತಮ ರನ್ನರ್ ಪ್ರಶಸ್ತಿಯನ್ನು ಗೋಲ್ಡನ್ ವಿಟ್ಲ ತಂಡ ಹಾಗೂ ಉತ್ತಮ ಬ್ಯಾಟ್ ಮ್ಯಾನ್ ಸುಹಾನ್ ಬನ್ನೂರು, ಬೌಲರ್ ಸುರೇಶ್ ಪುತ್ತೂರು, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಖಲೀಲ್, ಮ್ಯಾನ್ ಆಫ್ ಸಿರೀಸ್ ಅಲ್ತಾಫ್ ಬಸವನಗುಡಿ ಇವರು ಪ್ರಶಸ್ತಿಯನ್ನು ಪಡೆದರು.
ಸಂಘಟಕರಾದ ತೌಸೀಫ್ ಎಂ. ಜಿ, ಇಕ್ಬಾಲ್ ಕೋಡಿ, ಬಶೀರ್ ಬೊಬ್ಬೆಕೇರಿ, ಸರ್ಫರಾಝ್, ಇಮ್ತಿಯಾಝ್, ತಮೀಮ್, ಮುಸ್ತಫಾ, ಶಾಫಿ, ಅಜ್ವಲ್ ಉಪಸ್ಥಿತರಿದ್ದರು. ರಹೀಂ ಬೊಬ್ಬೆಕೇರಿ ಸ್ವಾಗತಿಸಿ, ನಿರೂಪಿಸಿದರು.