December 26, 2024

ಬೆಳಗಾವಿ ಚಲೋ ಅಂಬೇಡ್ಕರ್ ಜಾಥಾ-2 ಡಿಸೆಂಬರ್ 11 ರಂದು ಬಂಟ್ವಾಳದಲ್ಲಿ ವಾಹನಾ ಜಾಥಾ ಮತ್ತು ಸಭಾ ಕಾರ್ಯಕ್ರಮ

0

ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಹಮ್ಮಿಕೊಂಡಿರುವ ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ-2 ಡಿಸೆಂಬರ್ 10 ರಿಂದ 16ರ ವರೆಗೆ ನಡೆಯಲಿದ್ದು, ಡಿಸೆಂಬರ್ 11ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಬಂಟ್ವಾಳ ತಲುಪಲಿದೆ ಮತ್ತು ಬ್ರಹ್ಮರುಕೊಟ್ಲು ಟೋಲ್ ಪ್ಲಾಜಾ ಬಳಿಯಿಂದ ಕೈಕಂಬ ಕ್ಷೇತ್ರ ಕಛೇರಿ ಮುಂಭಾಗದವರೆಗೆ ವಾಹನ ಜಾಥಾ ಹಾಗೂ ಕೈಕಂಬ ಜಂಕ್ಷನ್ ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮದು ಅಹಿಂದ ಸರ್ಕಾರ, ನಾವು ಸಾಮಾಜಿಕ ನ್ಯಾಯದ ಚಾಂಪಿಯನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ, ಅಲ್ಪಸಂಖ್ಯಾತ, ಮತ್ತು ಹಿಂದುಳಿದ ವರ್ಗಗಳ ಹಲವು ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಿಲ್ಲ. ಕೇವಲ ನೆಪ ಮಾತ್ರದ ಮೌಖಿಕ ಹೇಳಿಕೆಗಳನ್ನು ನೀಡಿ ಕಣ್ಣೆರೆಸುವ ತಂತ್ರ ಮಾಡುತ್ತಿದೆ. ಬಿಜೆಪಿಯ ಐಟಿ ಸೆಲ್ ನ ಮತ್ತು ಬಿಜೆಪಿ ಬೆಂಬಲಿತ ಕೆಲವು ಕೋಮುವಾದಿ ಮಾಧ್ಯಮಗಳ ಅಪಪ್ರಚಾರಕ್ಕೆ ಹೆದರಿ ತಕ್ಷಣ U-Turn ಹೊಡೆದು ತನ್ನ ಹೇಳಿಕೆಗಳನ್ನೇ ಅಲ್ಲಗಳೆಯುವುದು ಈ ಸರ್ಕಾರದ ಸಾಮಾನ್ಯ ಚಾಳಿಯಾಗಿಬಿಟ್ಟಿದೆ. ಈ ಅಸಹಾಯಕ U Turn ಚಾಳಿಯನ್ನು ಖಂಡಿಸಿ, ಚಳಿಗಾಲದ ಅಧಿವೇಶನ ನಡೆಯುವ ಸುವರ್ಣಸೌಧ ಬೆಳಗಾವಿಗೆ ಜನಾಗ್ರಹಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ -2 ಅನ್ನು ಉಡುಪಿಯಿಂದ ಬೆಳಗಾವಿ ವರೆಗೆ ಹಮ್ಮಿಕೊಳ್ಳಲಾಗಿದೆ.

 

 

Leave a Reply

Your email address will not be published. Required fields are marked *

error: Content is protected !!