ದನಗಳನ್ನು ಮೇಯಿಸಲು ಬಿಟ್ಟು ರಸ್ತೆ ಬದಿ ಕುಳಿತಿದ್ದವರ ಮೇಲೆ ಕಾರು ಢಿಕ್ಕಿ: ಐವರು ಮಹಿಳೆಯರು ದಾರುಣ ಸಾವು

ಚೆನ್ನೈ: ದನಗಳನ್ನು ಮೇಯಿಸಲು ಬಿಟ್ಟು ರಸ್ತೆ ಬದಿ ಕುಳಿತಿದ್ದ ಐವರು ಮಹಿಳೆಯರಿಗೆ ಮೇಲೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸಾವನಪ್ಪಿದ ಘಟನೆ ಚೆನ್ನೈ ಸಮೀಪದ ಚೆಂಗಲ್ಪಟ್ಟು ಜಿಲ್ಲೆಯ ತಿರುಪೋರೂರು ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಮೃತರನ್ನು ಎಂ ಆಂಧಾಯಿ (71), ಸಿ ಲೋಗಮ್ಮಳ್ (56), ಜಿ ಯಶೋಧ (54), ಎಸ್ ವಿಜಯ (53), ಕೆ ಗೌರಿ (52) ಎಂದು ಗುರುತಿಸಲಾಗಿದ್ದು, ತಮ್ಮ ಜಾನುವಾರುಗಳನ್ನು ಸಮೀಪದ ಹೊಲಗಳಿಗೆ ಮೇಯಲು ಬಿಟ್ಟು ರಸ್ತೆ ಪಕ್ಕದಲ್ಲಿ ಕುಳಿತಿದ್ದರು.