ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಕಲ್ಲಡ್ಕ ಶಾಖೆಯ ನೂತನ ಸ್ವಂತ ಕಟ್ಟಡ ಸಮೃದ್ಧಿ ಉದ್ಘಾಟನೆ

ವಿಟ್ಲ: ಸಹಕಾರಿ ಕ್ಷೇತ್ರವು ಸಮಾಜದ ಸರ್ವರಿಗೂ ನೆರವಾಗುವ ಜತೆಗೆ ಅವರ ಆರ್ಥಿಕ ಸಮಸ್ಯೆಗಳಿಗೆ ತತ್‌ಕ್ಷಣ ಪರಿಹಾರ ಕಲ್ಪಿಸುವ ಜತೆಗೆ ಕಾನೂನುಗಳನ್ನು ಪಾಲಿಸಿಕೊಂಡು ಜನರಿಗೆ ಅನುಕೂಲಕರ ವ್ಯವಸ್ಥೆ ನೀಡುತ್ತಾ ಬಂದಿದೆ. ಇದೇ ಹಾದಿಯಲ್ಲಿ ಸಾಗುತ್ತಿರುವ ವಿಟ್ಲ ಗ್ರಾಮೀಣ ಬ್ಯಾಂಕ್ ಸಮಾಜದ ಸಮೃದ್ಧಿಯ ದೃಷ್ಟಿಯಿಂದ ಕೆಲಸ ಮಾಡುತ್ತಾ ಪ್ರಾಮಾಣಿಕತೆಯನ್ನೂ ಮೈಗೂಡಿಸಿಕೊಂಡು ಬಂದಿದೆ. ಕಳೆದ ೨೭ ವರ್ಷಗಳಿಂದ ಕಲ್ಲಡ್ಕ ಭಾಗದ ಜನತೆಯ ಅಭಿವೃದ್ಧಿಗೂ ವಿಶೇಷ ಕೊಡುಗೆ ನೀಡಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಸೋಮವಾರ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಕಲ್ಲಡ್ಕ ಶಾಖೆಯ ನೂತನ ಸ್ವಂತ ಕಟ್ಟಡ ಸಮೃದ್ಧಿಯ ನೂತನ ಕಟ್ಟಡ ಉದ್ಘಾಟನೆ ಹಾಗೂ ಕಟ್ಟಡಕ್ಕೆ ಶಾಖೆಯ ಸ್ಥಳಾಂತರ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಚ್.ಜಗನ್ನಾಥ ಸಾಲಿಯಾನ್ ಅವರು ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಅರ್ಪಿಸಿದರು. ಕಟ್ಟಡದ ಹೆಸರು ಅನಾವರಣಗೊಳಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್‌ಕುಮಾರ್ ಪುತ್ತೂರು ಮಾತನಾಡಿ, ಪಂಚಾಯತ್‌ರಾಜ್ ವ್ಯವಸ್ಥೆ ಹಾಗೂ ಸಹಕಾರ ಕ್ಷೇತ್ರ ನಿಕಟವಾದ ಸಂಪರ್ಕವನ್ನು ಹೊಂದಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಹಕಾರಿ ಸಂಘಗಳ ಕೊಡುಗೆ ವಿಶೇಷವಾಗಿದೆ. ಹತ್ತಾರು ವರ್ಷಗಳ ಪ್ರಯತ್ನ, ಶಿಸ್ತಿನ ಫಲವಾಗಿ ವಿಟ್ಲ ಗ್ರಾಮೀಣ ಬ್ಯಾಂಕ್ ಬೆಳೆದಿದ್ದು, ಜನರ ಬದುಕು ಕಟ್ಟಲು ನೆರವಾಗಿದೆ ಎಂದರು.
ಮುಖ್ಯಅತಿಥಿಗಳಾಗಿ ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ ಹಾಗೂ ಕ್ಯಾಂಪ್ಕೋ ನಿರ್ದೇಶಕ ಎಸ್.ಆರ್.ಸತೀಶ್ಚಂದ್ರ, ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ ಪುರುಷೋತ್ತಮ ಭಾಗವಹಿಸಿದ್ದರು.
ಬ್ಯಾಂಕಿನ ನಿರ್ದೇಶಕರಾದ ಎಂ.ಹರೀಶ್ ನಾಯಕ್ ವಿಟ್ಲ, ಮನೋರಂಜನ್ ಕೆ.ಆರ್.ಕರೈ, ಉದಯಕುಮಾರ್ ಆಲಂಗಾರು, ಬಾಲಕೃಷ್ಣ ಪಿ.ಎಸ್. ಬಿ.ಸಿ.ರೋಡು, ಗೋವರ್ಧನ್‌ಕುಮಾರ್ ಐ.ವಿಟ್ಲ, ಕೆ.ದಯಾನಂದ ಆಳ್ವ ಕಡಂಬು, ಡಿ.ಸುಂದರ ಕನ್ಯಾನ, ದಿವಾಕರ ವಿಟ್ಲ, ಜಯಂತಿ ಎಚ್.ರಾವ್ ವಿಟ್ಲ, ಶುಭಲಕ್ಷೀ?ಮ ವಿಟ್ಲ, ಮುಖ್ಯಕಾರ್ಯನಿರ್ವಹಣಾಽಕಾರಿ ಕೃಷ್ಣಮುರಳಿ ಶ್ಯಾಮ್ ಉಪಸ್ಥಿತರಿದ್ದರು.
ನಿರ್ದೇಶಕ ವಿಶ್ವನಾಥ್ ಎಂ.ವೀರಕಂಭ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಮೋಹನ್ ಕೆ.ಎಸ್.ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.