ಸ್ಥಳ ಮಹಜರು ವೇಳೆ ಪರಾರಿಯಾಗಲು ಯತ್ನ: ಗುಂಡು ಹಾರಿಸಿ ಮಂಗಳೂರಿನ ಇಬ್ಬರು ಆರೋಪಿಗಳ ಬಂಧನ
ಹುಬ್ಬಳ್ಳಿ: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ ಮಂಗಳೂರಿನ ಇಬ್ಬರು ದರೋಡೆಕೋರರಿಗೆ ಹುಬ್ಬಳ್ಳಿ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ.
ಮಂಗಳೂರಿನ ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್ ಕಾಲಿಗೆ ಗುಂಡೇಟು ತಗುಲಿದೆ. ಭಾನುವಾರ ಸ್ಥಳ ಮಹಜರು ಮಾಡುವ ವೇಳೆ ದರೋಡೆಕೋರರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಯತ್ನಿಸಿದ್ದರು.
ಈ ವೇಳೆ ಆರೋಪಿಗಳ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿದ್ದಾರೆ. ಅಧಿಕಾರಿಗಳು ಮೂರು ಸುತ್ತು ಗುಂಡು ಹಾರಿಸಿದ್ದು, ಆರೋಪಿಗಳು ಗಾಯಗೊಂಡಿದ್ದಾರೆ. ಫಾರೂಕ್‌ಗೆ ಎರಡು ಗುಂಡುಗಳು ತಗುಲಿದ್ದರೆ. ಭರತ್‌ಕುಮಾರ್‌ಗೆ ಕಾಲಿಗೆ ಒಂದು ಗುಂಡೇಟು ಬಿದ್ದಿದೆ. ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ.