November 24, 2024

ವಿಟ್ಲ: ಸ್ವಸ್ತಿಕ್‌ ಫ್ರೆಂಡ್ಸ್ ವಿಟ್ಲ ಆಶ್ರಯದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ.) ಪುತ್ತೂರು ತಾಲೂಕು ಸಹಯೋಗದಲ್ಲಿ ಉಚಿತ ಹೃದ್ರೋಗ ಮತ್ತು ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

0

ವಿಟ್ಲ: ಸ್ವಸ್ತಿಕ್‌ ಫ್ರೆಂಡ್ಸ್ ವಿಟ್ಲ ಆಶ್ರಯದಲ್ಲಿ  ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ.) ಪುತ್ತೂರು ತಾಲೂಕು, ಎ.ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು, ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್‌ ಟ್ರಸ್ಟ್ ಭಾರತೀಯ ಅಂಚೆ ಇಲಾಖೆ ಇದರ ಸಹಯೋಗದಲ್ಲಿ ದಿ| ಬಿ. ಸುಮಿತ್ರಾ ಟೀಚರ್‌‌ ಸ್ಮರಣಾರ್ಥ ಉಚಿತ ಹೃದ್ರೋಗ ಮತ್ತು ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ, ಆಧಾರ್ ಕಾರ್ಡ್  ತಿದ್ದುಪಡಿ, ಅಂಚೆ ಇಲಾಖೆಯ ವಿವಿಧ ಸೌಲಭ್ಯಗಳನ್ನು  ಒದಗಿಸುವ ಕಾರ್ಯಕ್ರಮ ವಿಟ್ಲ ಸರಕಾರಿ ಪ್ರೌಢ ಶಾಲೆ(R.M.S.A)ಯಲ್ಲಿ ನಡೆಯಿತು.

ತಾರಾನಾಥ ವಿಟ್ಲ ಅಧ್ಯಕ್ಷರು ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ವಿಟ್ಲ ಪುಷ್ಪಕ್ ಕ್ಲಿನಿಕ್ ವೈದ್ಯರು ಡಾ| ವಿ.ಕೆ ಹೆಗ್ಡೆ  ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ  ಉದ್ಯಮಿ ಸತ್ಯನಾರಾಯಣ ಭಟ್ ಉಕ್ಕುಡ, ಪುತ್ತೂರು ತಾಲೂಕು ಜರ್ನಲಿಸ್ಟ್ ಯೂನಿಯನ್ (ರಿ) ಅಧ್ಯಕ್ಷರು ರಾಮದಾಸ್‌ ಶೆಟ್ಟಿ, ರೋಟರಿ ಕ್ಲಬ್ ಕಾರ್ಯದರ್ಶಿ ಸೋಮಶೇಖರ್, ಪುಷ್ಪಲತಾ ಮಾರ್ನಮಿಗುಡ್ಡೆ, ಅಂಚೆ ಇಲಾಖೆಯ ಗುರುಪ್ರಸಾದ್, ಎ ಜೆ ಆಸ್ಪತ್ರೆಯ ಡಾ ವರ್ಷಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾರತ್‌ ಗ್ರೂಪ್ಸ್ ವಿಟ್ಲ ಇದರ ಮಾಲಕರು ಸಂಜೀವ ಪೂಜಾರಿಯವರನ್ನು ಗೌರವಿಸಲಾಯಿತು. ವಿಶ್ವನಾಥ ಅಳಿಕೆ ಸ್ವಾಗತಿಸಿ,  ಅರುಣ್ ವಿಟ್ಲ ವಂದಿಸಿದರು. ಹರೀಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಎ.ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು ಇಲ್ಲಿನ ನುರಿತ ವೈದ್ಯರುಗಳ ಸಹಕಾರದಲ್ಲಿ  ಕಣ್ಣಿನ ತಪಾಸಣೆ, ಹೃದಯ ಸಂಬಂಧಿತ ತಪಾಸಣೆ, ಬಿ.ಪಿ, ಶುಗರ್‌ ಇವುಗಳ ಉಚಿತ ತಪಾಸಣೆ ನಡೆಯಿತು. ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಸಹಭಾಗಿತ್ವದಲ್ಲಿ ಆಧಾರ್‌ ನೋಂದಾವಣೆ ಹಾಗೂ ತಿದ್ದುಪಡಿ ಅಭಿಯಾನ ನಡೆಯಿತು. ಹಾಗೂ ಅಂಚೆ ಇಲಾಖೆಯ ಅಂಚೆ ಜನಸಂಪರ್ಕ ಅಭಿಯಾನ ಯೋಜನೆಯಲ್ಲಿ ಅಂಚೆ ಇಲಾಖೆ ಸಮಗ್ರ ರಕ್ಷಣಾ ಯೋಜನೆ (ಅಪಘಾತ ವಿಮೆ) ಮಾಡಲಾಯಿತು. ಒಟ್ಟು 300 ಕ್ಕೂ ಹೆಚ್ಚು ಫಲಾನುಭವಿಗಳು ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು.

Leave a Reply

Your email address will not be published. Required fields are marked *

You may have missed

error: Content is protected !!