November 21, 2024

ಪರಿಶುದ್ಧ ಗಾಳಿಗೆ ದೇಶದಲ್ಲೇ ಅಗ್ರಸ್ಥಾನ ಪಡೆದ ಮಡಿಕೇರಿ

0

ಮಡಿಕೇರಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದಲ್ಲಿ ಪರಿಸರ ಮಾಲಿನ್ಯ ತೀವ್ರಗತಿಯಲ್ಲಿ ಏರುತ್ತಿರು ಜೊತೆ ಜೀವ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತಿರುವ ಈ ಕಾಲಘಟ್ಟದಲ್ಲಿ ಮಂಜಿನ ನಗರಿ ಕೊಡಗಿನ ಮಡಿಕೇರಿ ಪರಿಶುದ್ಧ ಗಾಳಿಗೆ ದೇಶದಲ್ಲೇ ಅಗ್ರಸ್ಥಾನ ಪಡೆದಿದೆ.

ಕೇಂದ್ರ ಪರಿಸರ ಮಾಲಿನ್ಯ ಮಂಡಳಿಯು ಪರಿಶುದ್ಧ ಗಾಳಿ ಹೊಂದಿರುವ ಟಾಪ್ 10 ನಗರಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದು. ಅದರಲ್ಲಿ ಮಡಿಕೇರಿ ನಗರಕ್ಕೆ ಪ್ರಥಮ ಸ್ಥಾನ ದೊರೆತ್ತಿದೆ.

ಕಳೆದ ವರ್ಷ ಕೇಂದ್ರ ಪರಿಸರ ಮಾಲಿನ್ಯ ಮಂಡಳಿ ಬಿಡುಗಡೆ ಮಾಡಿದ ಪಟ್ಟಿಗಳಲ್ಲಿ ಮಡಿಕೇರಿ 5ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ದೇಶದಲ್ಲಿಯೇ ಅಗ್ರಸ್ಥಾನ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. 2 ನೇ ಸ್ಥಾನವನ್ನು ಪಾಲ್ಕಲೈಪೆರೂರ್ಪಡೆದುಕೊಂಡಿದ್ದರೆ, ಹೀಗೆ ಕ್ರಮವಾಗಿ ಕರೂರು, ತಿರುನೆಲ್ವೇಲಿ, ತಿರುಪತಿ, ಊಟಿ, ವೆಲ್ಲೂರ್, ರಾಣಿಪೇಟ್, ಗದಗ, ತೂತ್ಕುಡಿ ಹಾಗೂ ಪುದುಚೇರಿ ಕ್ರಮವಾದ ಸ್ಥಾನಗಳನ್ನು ಪಡೆದಿವೆ. ಮಡಿಕೇರಿಯಲ್ಲಿ ಗಾಳಿಯ ಮಾಲಿನ್ಯದ ಎಕ್ಯೂಐ ಸೂಚ್ಯಂಕದ ಪ್ರಕಾರ 10 ಆಗಿದ್ದರೆ ದೆಹಲಿಯಲ್ಲಿ ಎಕ್ಯೂಐ ಬರೋಬ್ಬರಿ 424 ರಷ್ಟು ದಾಖಲಾಗಿದೆ.

ಮಡಿಕೇರಿಯಲ್ಲಿ ಗಾಳಿಯಲ್ಲಿ ಇರುವ ಮಾಲಿನ್ಯ ಪ್ರಮಾಣ ಅಕ್ಟೋಬರ್ 2021 ರಿಂದ ಸೆಪ್ಟೆಂಬರ್ 2022 ರ ತನಕ 20.7 ರಷ್ಟಿತ್ತು. 2022 ರ ಅಕ್ಟೋಬರ್ ನಿಂದ 2023 ರ ಸೆಪ್ಟೆಂಬರ್ ಅವಧಿಯಲ್ಲಿ ಇದು 18.1 ಕ್ಕೆ ಇಳಿಕೆ ಆಗುವ ಮೂಲಕ ಶೇ 12.4 ರಷ್ಟು ಪ್ರಮಾಣದಲ್ಲಿ ಗಾಳಿಯ ಗುಣಮಟ್ಟದಲ್ಲಿ ಹೆಚ್ಚಳ ಕಂಡುಬಂದಿದೆ.

Leave a Reply

Your email address will not be published. Required fields are marked *

error: Content is protected !!