February 4, 2026

ಮಂಗಳೂರು | ಲಕ್ಕಿ ಸ್ಕೀಮ್‌ಗಳ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ ಆರೋಪ: ನಿಗಾ ವಹಿಸಲು ಫ್ಲೈಯಿಂಗ್‌ ಸ್ಕ್ವಾಡ್‌ ರಚನೆ

0
image_editor_output_image1101389778-1731999008585.jpg

ಮಂಗಳೂರು: ಮಂಗಳೂರು ಕಮಿಷನರೇಟ್‌ ವ್ಯಾಪ್ತಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫ್ಲ್ಯಾಟ್‌, ಕಾರು, ಬೈಕ್‌, ಚಿನ್ನ ಸೇರಿದಂತೆ ನಾನಾ ರೀತಿಯ ಬಹುಮಾನಗಳ ಆಮಿಷ ತೋರಿಸಿ ಸ್ಕೀಮ್‌ಗಳ ಹೆಸರಿನಲ್ಲಿ ಗ್ರಾಹಕರನ್ನು ಆಕರ್ಷಿಸುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ನಿಗಾ ವಹಿಸಲು ಫ್ಲೈಯಿಂಗ್‌ ಸ್ಕ್ವಾಡ್‌ ರಚಿಸಲಾಗಿದೆ.

ಸ್ಕೀಮ್‌ ನಡೆಸುತ್ತಿರುವ ಕಚೇರಿಗೆ ಇತ್ತೀಚೆಗೆ ಅಪರಾಧ ಪತ್ತೆದಳ (ಸಿಸಿಬಿ)ದ ತಂಡ ದಾಳಿ ನಡೆಸಿ ಕೆಲವೊಂದು ಮಾಹಿತಿಗಳನ್ನು ಕಲೆ ಹಾಕಿರುವುದಾಗಿ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೆ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ಅವರು ಎಲ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲೂ ನಡೆಯುತ್ತಿರುವ ಸ್ಕೀಮ್‌ಗಳ ಬಗ್ಗೆ ಮಾಹಿತಿ ನೀಡಬೇಕೆಂದು ನಿರ್ದೇಶನ ನೀಡಿದ್ದಾರೆ.

ಫ್ಲೈಯಿಂಗ್‌ ಸ್ಕ್ವಾಡ್‌ಗಳು ತಪಾಸಣೆಯನ್ನು ಮುತುವರ್ಜಿಯಿಂದ ನಡೆಸಿ ವರದಿ ನೀಡಬೇಕು. ಸಾರ್ವಜನಿಕರು ವಂಚನೆಗೊಳಗಾಗುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣಗಳ ಬಗ್ಗೆ ಜರುಗಿದ ಕ್ರಮದ ಬಗ್ಗೆ ಮಾಹಿತಿ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!