February 4, 2026

ಮದುವೆಯ ಸಂಭ್ರಮದಲ್ಲಿ ಸಂಬಂಧಿಕರ ಜೊತೆ ನೃತ್ಯ ಮಾಡುವಾಗ ಹೃದಯಾಘಾತದಿಂದ ವ್ಯಕ್ತಿ ಮೃತ್ಯು

0
image_editor_output_image1200548378-1731996442696.jpg

ಉತ್ತರ ಪ್ರದೇಶ: ಮದುವೆಯ ಸಂಭ್ರಮದಲ್ಲಿ ತನ್ನ ಸಂಬಂಧಿಕರ ಜೊತೆ ನೃತ್ಯ ಮಾಡುತ್ತಲೇ ಹೃದಯಾಘಾತಗೊಂಡು ಮೃತಪಟ್ಟ ಘಟನೆ ಭಾನುವಾರ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಭೋಜ್‌ಪುರ ಗ್ರಾಮದ ನಿವಾಸಿ ಶಿವಂ (22) ಎನ್ನಲಾಗಿದೆ. ಶಿವಂ ಇಲ್ಲಿನ ಶಾಲೆಯೊಂದರಲ್ಲಿ ಕಂಪ್ಯೂಟರ್ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು ಈತನಿಗೆ ಆಗ್ರಾದ ಮೋಹಿನಿ ಅವರೊಂದಿಗೆ ವಿವಾಹವಾಗಬೇಕಿತ್ತು. ಅದರಂತೆ ಶಿವಂ ಮನೆಯಲ್ಲಿ ಸಂಭ್ರಮ ಮನೆಮಾಡಿತ್ತು.

ಅಲ್ಲದೆ ಮದುವೆ ಕಾರ್ಯಕ್ಕೆ ಕುಟುಂಬ ಸದಸ್ಯರು ಎಲ್ಲರು ಮನೆಗೆ ಬಂದಿದ್ದರು ಸೋಮವಾರ(ನ.18) ರಂದು ಮದುವೆ ನಡೆಯಬೇಕಿತ್ತು ಅದರಂತೆ ಭಾನುವಾರ ಕುಟುಂಬ ಸದಸ್ಯರ ಜೊತೆಗೆ ಶಿವಂ ನೃತ್ಯ ಮಾಡುತ್ತಿದ್ದ ಈ ವೇಳೆ ಏಕಾಏಕಿ ಹೃದಯಾಘಾತವಾಗಿದೆ ಕೂಡಲೇ ಕುಟುಂಬ ಸದಸ್ಯರು ಆತನನ್ನು ಆಸ್ಪತ್ರೆಗೆ ಕರೊದೊಯ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!