ವಿಟ್ಲ: ಪಿ. ಡಿ ಎನ್ ಎ. ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆ (ರಿ ) ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಹಿಶಾಮ್ ಕಲ್ಲಂಗಳ ಆಯ್ಕೆ
ಮಂಗಳೂರು : ಪಿ. ಡಿ ಎನ್ ಎ. ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆ (ರಿ ) ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಹಿಶಾಮ್ ಕಲ್ಲಂಗಳ ಅವರು ಆಯ್ಕೆಯಾಗಿದ್ದಾರೆ.
ಪಿ. ಡಿ ಎನ್ ಎ. ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಆಯ್ಕೆ ಮಾಡಲಾಗಿದ್ದು, ಸ್ಪೀಕರ್ ಯು.ಟಿ ಖಾದರ್ ಅವರ ಬೆಂಗಳೂರಿನ ಸರಕಾರಿ ನಿವಾಸದಲ್ಲಿ ಅಧಿಕಾರ ಸ್ವೀಕರಿಸಿದರು.
ಹಿಶಾಮ್ ಕಲ್ಲಂಗಳ ಅವರು ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದ್ದು, ಜಿಲ್ಲಾದಾದ್ಯಂತ ಸಮಾಜ ಸೇವೆ ಮೂಲಕ ಜನಮನ್ನಣೆಗಳಿಸಿದ್ದರು. ಇದೀಗ ಹಿಶಾಮ್ ಕಲ್ಲಂಗಳ ಅವರಿಗೆ ಭ್ರಷ್ಟಾಚಾರ ನಿಗ್ರಹದಳದ ಸಂಸ್ಥೆಯ ಜಿಲ್ಲಾಧ್ಯಕ್ಷ ಸ್ಥಾನ ಲಭಿಸಿದೆ.




