December 16, 2025

ಮಂಗಳೂರು ಅಪ್ರಾಪ್ತ ಬಾಲಕ ದಾಖಲಿಸಿದ್ದ ಪೊಕ್ಸೊ ಪ್ರಕರಣ ರದ್ದಗೊಳಿಸಿ ಕೋರ್ಟ್

0
image_editor_output_image-341193705-1731565736126.jpg

ಮಂಗಳೂರು: ಉಪನ್ಯಾಸಕನ ಮೇಲೆ ಸಿಟ್ಟಿಗೆ ಆತ ತನ್ನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಅಪ್ರಾಪ್ತ ಬಾಲಕ ದಾಖಲಿಸಿದ್ದ ಪೋಕ್ಸೋ ಪ್ರಕರಣವನ್ನು ರದ್ದಗೊಳಿಸಿ ಕಾಲೇಜಿನ ಉಪನ್ಯಾಸಕರೊಬ್ಬರನ್ನು ದೋಷ ಮುಕ್ತಗೊಳಿಸಿ ಇಲ್ಲಿನ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತ ಗತಿ ವಿಶೇಷ ನ್ಯಾಯಾಲಯ (ಪೊಕ್ರೋ) ದೋಷಮುಕ್ತ ಗೊಳಿಸಿದೆ.

ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ನೃತ್ಯ ಅಭ್ಯಾಸ ಮಾಡುತ್ತಿದ್ದಾಗ ಉಪನ್ಯಾಸಕ ನೋಟ್ಸ್ ನೋಡುವ ನೆಪದಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯನ್ನು ಕರೆಸಿಕೊಂಡಿದ್ದರು. ನಂತರ ದೈಹಿಕ ಶಿಕ್ಷಕರ ಕೊಠಡಿಗೆ ಕರೆದೊಯ್ದು ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ನೀಡುವುದಾಗಿ ಆಮಿಷವೊಡ್ಡಿ ಬಟ್ಟೆ ಕಳಚಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದರು. ನಂತರವೂ ಹಲವು ಬಾರಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದರು’ ಎಂದು ಆರೋಪಿಸಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ದೂರು ನೀಡಿದ್ದ. ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ನಡೆಸಿದ್ದ ಸಹಾಯಕ ಪೊಲೀಸ್ ಆಯುಕ್ತ ಪಿ. ಎ. ಹೆಗಡೆ ಮತ್ತು ಎಸ್.ಮಹೇಶ್ ಕುಮಾ‌ರ್ ದೋಷರೋಪಣ ಪಟ್ಟಿ ಸಲ್ಲಿಸಿದ್ದರು.

ಕೋರ್ಟ್ ನಲ್ಲಿ ವಿಚಾರಣೆ ನಡೆಸಿದ ಸಂದರ್ಭ ವಿಧ್ಯಾರ್ಥಿ ಉಪನ್ಯಾಸಕ ಮೇಲೆ ಸಿಟ್ಟಾಗಿದ್ದ ಎಂದು ತಿಳಿದು ಬಂದಿದೆ. ಪರೀಕ್ಷೆಗಳಲ್ಲಿ ಕಡಿಮೆ ಅಂಕ ಬಂದ ಕಾರಣ ವಿಧ್ಯಾರ್ಥಿಯ ಪೋಷಕರನ್ನು ಕರೆಸಿದ್ದರು. ಅಲ್ಲದೆ ವಿದ್ಯಾರ್ಥಿಯನ್ನು ಪೊಲೀಸರು ಡ್ರಗ್ಸ್ ಸೇವನೆ ವಿಚಾರವಾಗಿ ವಿಚಾರಣೆ ಮಾಡಿ, ಎಚ್ಚರ ನೀಡಿದ ಕುರಿತು ಕಾಲೇಜಿನ ಪ್ರಾಂಶುಪಾಲರು ನ್ಯಾಯಾಲದಲ್ಲಿ ಹೇಳಿಕೆ ನೀಡಿದ್ದರು. ವಿದ್ಯಾರ್ಥಿ ಡ್ರಗ್ಸ್ ಸೇವನೆ ಮಾಡಿದ ಬಗ್ಗೆ ಆರೋಪಿ ಉಪನ್ಯಾಸಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಹಗೆಯಿಂದ ವಿದ್ಯಾರ್ಥಿಯು ಕತೆ ಕಟ್ಟಿ ಉಪನ್ಯಾಸಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದ’ ಎಂದು ಆರೋಪಿ ಪರ ವಕೀಲರಾದ ರಾಜೇಶ್ ಕುಮಾರ್ ಅಮ್ಮಾಡಿ ವಾದಿಸಿದ್ದರು. ಹಗೆಯಿಂದ ವಿಧ್ಯಾರ್ಥಿಯೊಬ್ಬ ಕಾನೂನನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!