ವಿಟ್ಲ: ಹೊರೈಝನ್ ಶಾಲೆ ರಕ್ಷಕ – ಶಿಕ್ಷಕ ಸಭೆ
ವಿಟ್ಲ: ಹೊರೈಝನ್ ಪಬ್ಲಿಕ್ ಸ್ಕೂಲ್ ನ ರಕ್ಷಕ – ಶಿಕ್ಷಕ ಸಭೆಯು ಶಾಲೆಯ ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್ ಅಧ್ಯಕ್ಷತೆಯಲ್ಲಿ ನಡೆಯಿತು. ಮದರಸ ಶಿಕ್ಷಕ ಅಬ್ದುಲ್ ಖಾದರ್ ಶಿಹಾಬ್ ಕಿರಾಅತ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಶಾಲೆಯ ಕಾರ್ಯದರ್ಶಿ ನೋಟರಿ ಅಬೂಬಕರ್, ಜೊತೆ ಕಾರ್ಯದರ್ಶಿ ಇಕ್ಬಾಲ್ ಹಳೆಮನೆ, ಟ್ರಸ್ಟಿಗಳಾದ ಇಕ್ಬಾಲ್ ಶೀತಲ್, ಅಬ್ದುಲ್ ಹಮೀದ್ ಬದ್ರಿಯಾ, ಇಸಾಕ್ ಸಾಹೇಬ್, ವಿ.ಪಿ ಅಶ್ರಫ್, ಮಸೀದಿಯ ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ ಉಪಸ್ಥಿತರಿದ್ದರು.
ಈ ಸಂದರ್ಭ ಡಾ. ಮುಬಶ್ಶಿರ್ ಮತ್ತು ಪ್ರಸೂತಿ ತಜ್ಞೆ ಡಾ. ಶಾಹಿನಾ ಬೇಗಂ, ತನ್ವೀರ್ ಅಹಮದ್ ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಸದರ್ ಉಮರ್ ಸಅದಿ ಮದರಸ ಶಿಕ್ಷಣದ ಕುರಿತು ವಿವರಿಸಿದರು.
ಮುಖ್ಯ ಶಿಕ್ಷಕ ಮನಾಃಝಿರ್ ಮುಡಿಪು ಪ್ರಸ್ತಾವನೆ ಮಾಡಿದರು.
ಮಹಮ್ಮದ್ ಸಲ್ವಾನ್ ಸ್ವಾಗತಿಸಿದರು. ಶಿಕ್ಷಕಿ ಬುಶ್ರಾ ವಂದಿಸಿ,
ರಮೀಝಾ ನಿರೂಪಿಸಿದರು. ಉಪ ಮುಖ್ಯ ಶಿಕ್ಷಕಿ ಗಾಯತ್ರಿ ಸಹಕರಿಸಿದರು.




