ವಿಟ್ಲ: ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ವಾಹನ ಪಲ್ಟಿ- 10ಕ್ಕಿಂತಲೂ ಅಧಿಕ ಮಕ್ಕಳಿಗೆ ಗಾಯ: ವಿಟ್ಲದ ಖಾಸಗಿ ಶಾಲೆಯ ವಿದ್ಯಾರ್ಥಿಗಳು
ವಿಟ್ಲ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರೊಂದು ಬ್ರೇಕ್ ಫೈಲ್ ಆಗಿ ಪಲ್ಟಿಯಾದ ಘಟನೆ ವಿಟ್ಲದ ಮುಚ್ಚಿರಪದವು ಎಂಬಲ್ಲಿ ನಡೆದಿದೆ.
ಘಟನೆಯಿಂದ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಚಾಲಕನ ತಲೆಗೆ ಗಾಯವಾಗಿದ್ದು ಹಲವು ಮಕ್ಕಳಿಗೂ ಗಾಯಗಳಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.
ಪೆರುವಾಯಿ ಮಿತ್ತಮೂಲೆ ಎಂಬಲ್ಲಿದ್ದ ಮಕ್ಕಳನ್ನು ವಿಟ್ಲದ ಶಾಲೆಗೆ ಕೊಂಡೊಯ್ಯುಲು ಬಸ್ಸಿಗೆ ಹತ್ತಿಸಲು ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಚಾಲಕ ಮುಳಿಯ ರಾಮಣ್ಣ ಅವರ ತಲೆಗೆ ಗಾಯವಾಗಿದೆ.




