March 28, 2026

ಮಂಗಳೂರು: ಪೆಟ್ರೋಲ್ ಪಂಪ್ ಮಂಭಾಗವೇ ಹೊತ್ತಿ ಉರಿದ ಮಾರುತಿ‌ 800 ಕಾರು

0
image_editor_output_image1946444438-1731304736609.jpg

ಮಂಗಳೂರು: ಮಾರುತಿ‌- 800 ಕಾರೊಂದು ಪೆಟ್ರೋಲ್ ಪಂಪ್ ಮಂಭಾಗವೇ ಹೊತ್ತಿ ಉರಿದ ಘಟನೆ ನಗರದ ಲೇಡಿಹಿಲ್ ಬಳಿ ನಡೆದಿದೆ. ಪಾರ್ಶ್ವನಾಥ ಎಂಬವರಿಗೆ ಸೇರಿದ ಕಾರು ಇದು ಎಂದು ತಿಳಿದು ಬಂದಿದೆ.

ಲೇಡಿಹಿಲ್‌ ಬಳಿ ಆಗಮಿಸುತ್ತಿದ್ದಂತೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅಷ್ಟರಲ್ಲಾಗಲೇ ಕಾರು ಚಾಲಕ ಹೊರಕ್ಕೆ ಜಿಗಿದಿದ್ದಾರೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಕಾರಿನ್ನು ಸಂಪೂರ್ಣ ಆವರಿಸಿದೆ. ತಕ್ಷಣ ಪೆಟ್ರೋಲ್ ಬಂಕ್ ಸಿಬ್ಬಂದಿ ನೀರು ಸುರಿದು ಬೆಂಕಿ ನಂದಿಸುವ ಯತ್ನ ಮಾಡಿದ್ದಾರೆ.

ಪೆಟ್ರೋಲ್ ಬಂಕ್ ಬಳಿಯೇ ಘಟನೆ ನಡೆದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಂಕ್ ಅಡಿಯಲ್ಲಿ ಪೆಟ್ರೋಲ್ ಟ್ಯಾಂಕ್ ಇದ್ದಿದ್ದರಿಂದ ಟ್ಯಾಂಕ್‌ಗೆ ಬೆಂಕಿ ಹತ್ತಿಕೊಳ್ಳುವ ಆತಂಕವೂ ಇತ್ತು. ಆದರೆ ಅಷ್ಟರಲ್ಲಾಗಲೇ ಬೆಂಕಿಗೆ ನೀರು ಹಾಕಿದ್ದರಿಂದ, ಅಗ್ನಿಶಾಮಕದಳವೂ ಆಗಮಿಸಿದ್ದರಿಂದ ಅದೃಷ್ಟವಶಾತ್ ಭಾರೀ ದುರಂತವೊಂದು ತಪ್ಪಿದಂತಾಗಿದೆ.

Leave a Reply

Your email address will not be published. Required fields are marked *

error: Content is protected !!