March 19, 2026

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯ 4ನೇ ಮಹಡಿಯಿಂದ ಹಾರಿ ಮಹಿಳೆ ಸಾವು

0
image_editor_output_image-694240199-1731305393389.jpg

ಮಂಗಳೂರು: ಬಾಣಂತಿಯೋರ್ವರು ಲೇಡಿಗೋಷನ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ ಘಟನೆ ಇಂದು (ನ.11) ಮುಂಜಾನೆ ಸಂಭವಿಸಿದೆ.

ಕಾರ್ಕಳದ ರಂಜಿತಾ (28) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಹೆರಿಗೆಗಾಗಿ ಕಾರ್ಕಳ ಆಸ್ಪತ್ರೆಗೆ ದಾಖಲಾಗಿದ್ದ ರಂಜಿತಾ ನಂತರದಲ್ಲಿ ಹಲವು ಕ್ಲಿಷ್ಟ ಆರೋಗ್ಯ ಸಮಸ್ಯೆಯಿಂದ ಲೇಡಿಗೋಷನ್ ಗೆ ಅ.28 ಕ್ಕೆ ದಾಖಲಾಗಿದ್ದರು. ಅ.30 ಕ್ಕೆ ಸಿಸೇರಿಯನ್ ಹೆರಿಗೆಯಾಗಿದ್ದು, ಮಗು ಐಸಿಯುನಲ್ಲಿತ್ತು. ನ.3 ಕ್ಕೆ ಮಗು ಮೃತಪಟ್ಟಿತ್ತು.

ಮಹಿಳೆ ಗುಣಮುಖರಾಗಿದ್ದು ಸೋಮವಾರ ಡಿಸ್ಚಾರ್ಜ್ ಆಗುವುದಾಗಿ ವೈದ್ಯರು ಸೂಚಿಸಿದ್ದರು. ಮನೆಯವರು ಕೂಡ ಸಿದ್ದರಾಗಿ ಬಂದಿದ್ದರು. ಆದರೆ ಮಹಿಳೆ ಏಕಾಏಕಿ ನಾಲ್ಕನೇ ಮಹಡಿಯಿಂದ ಹಾರಿದ್ದಾರೆ. ಕೂಡಲೇ ಮಹಿಳೆಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಕೆ ಮೃತಪಟ್ಡಿದ್ದಾರೆಂದು ಆಸ್ಪತ್ರೆಯ ವೈದ್ಯಾಧಿಕಾರಿಯವರು ತಿಳಿಸಿದ್ದಾರೆ. ಈ ಕುರಿತು ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!