ಕಡಬ: ಸಂಬಂಧಿಕರ ನಡುವೆ ಜಗಳ: ಕೊಲೆಯಲ್ಲಿ ಅಂತ್ಯ
ಕಡಬ: ಜಾಗದ ವಿವಾದಕ್ಕೆ ಸಂಬಂಧಿಸಿ ಅಣ್ಣ ತಮ್ಮನ ನಡುವೆ ನಡೆದ ಜಗಳ ಕೊಲೆಯೊಂದಿಗೆ ಅಂತ್ಯ ಕಂಡ ಘಟನೆ ಕಡಬ ತಾಲೂಕಿನ ಗೋಳಿತೊಟ್ಟು ಸಮೀಪದ ಆಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ನಡೆದಿದೆ.
ಪೆರ್ಲ ನಿವಾಸಿಯಾಗಿದ್ದ ರಮೇಶ ಗೌಡ(51ವ.) ಕೊಲೆಯಾದವರು. ಮೃತರ ಸಂಬಂಧಿ ಹರೀಶ್ ಎಂಬಾತ ಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದ್ದು, ರಮೇಶ್ ಅವರು ಬೈಕ್ ನಲ್ಲಿ ಬರುತ್ತಿರುವ ವೇಳೆ ಅವರನ್ನು ಅಡ್ಡಕಟ್ಟಿ ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.





