February 4, 2026

ಕಿರುತೆರೆ ನಟ ನಿತಿನ್ ಚೌಹಾಣ್ ನಿಗೂಢವಾಗಿ ಸಾವು

0
image_editor_output_image-1488850504-1731055536200.jpg

ಮುಂಬೈ : ‘ದಾದಗಿರಿ 2’ ರಿಯಾಲಿಟಿ ಶೋ ವಿಜೇತ ಕಿರುತೆರೆ ಖ್ಯಾತಿಯ ನಟ ನಿತಿನ್ ಚೌಹಾಣ್ ( 35) ಗುರುವಾರ (ನ.7) ಮುಂಬೈನಲ್ಲಿ ನಿಧನರಾದರು.

ನಿತಿನ್ ಚೌಹಾಣ್ ಎಂಟಿವಿ ಶೋಗಳಾದ ‘ಸ್ಪ್ಲಿಟ್ಸ್ವಿಲ್ಲಾ 5’, ‘ಜಿಂದಗಿ ಡಾಟ್ ಕಾಮ್’, ‘ಕ್ರೈಮ್ ಪೆಟ್ರೋಲ್’ ಮತ್ತು ‘ಫ್ರೆಂಡ್ಸ್’ ನಲ್ಲಿ ಮಿಂಚಿದ್ದಾರೆ. ಕೊನೆಯ ಬಾರಿಗೆ 2022 ರಲ್ಲಿ SAB ಟಿವಿಯ ‘ತೇರಾ ಯಾರ್ ಹೂನ್ ಮೈನ್’ ನಲ್ಲಿ ಕಾಣಿಸಿಕೊಂಡಿದ್ದು ಹಠಾತ್ ಸಾವನ್ನಪ್ಪಿರುವ ಸುದ್ಧಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ನಿತಿನ್ ಅವರ ಸಾವನ್ನು ಅವರ ಸಹ ನಟರಾದ ಸುದೀಪ್ ಸಾಹಿರ್ ಮತ್ತು ಸಯಂತನಿ ಘೋಷ್ ನಟನ ಸಾವಿನ ಸುದ್ಧಿಯನ್ನು ಖಚಿತಪಡಿಸಿದ್ದಾರೆ. ಆದರೆ, ಇದನ್ನು ಬಿಟ್ಟು ಬೇರೆ ಯಾವುದೇ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ. ವಿಭೂತಿ ಠಾಕೂರ್ ನಿತಿನ್‌ರವರ ಮಾಜಿ ಸಹನಟನಾಗಿದ್ದು, ಅವರು ತಮ್ಮ ಪೋಸ್ಟ್ ನಲ್ಲಿ, ‘ನಿತಿನ್ ಚೌಹಾಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!