February 4, 2026

ಕಿನ್ನಿಗೋಳಿ: ಆಟೋಗೆ ಢಿಕ್ಕಿಹೊಡೆದ ಲಾರಿ, ಆಟೋ ಚಾಲಕ ಸಹಿತ ಇಬ್ಬರು ಪ್ರಯಾಣಿಕರಿಗೆ ಗಾಯ

0
image_editor_output_image1853427521-1731049023487.jpg

ಕಿನ್ನಿಗೋಳಿ: ಆಟೋಗೆ ಲಾರಿ ಡಿಕ್ಕಿಯಾಗಿ ಆಟೋ ಚಾಲಕ ಸಹಿತ ಇಬ್ಬರು ಪ್ರಯಾಣಿಕರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೂಡುಬಿದ್ರಿ ಮುಲ್ಕಿ ರಾಜ್ಯ ಹೆದ್ದಾರಿ 70 ರ ಕಿನ್ನಿಗೋಳಿಯ ಹೊಸ ಕಾವೇರಿ ಎಂಬಲ್ಲಿ ನಡೆದಿದೆ.

ಗಾಯಗೊಂಡ ಆಟೋ ಚಾಲಕನನ್ನು ಕಿನ್ನಿಗೋಳಿ ಸಮೀಪದ ಉಲ್ಲಂಜೆ ನಿವಾಸಿ ವಿಜಯ ಆಚಾರ್ಯ(40), ಪ್ರಯಾಣಿಕರಾದ ಗೋಳಿಜೋರಾ ನಿವಾಸಿಗಳಾದ ದಿಕ್ಷೀತಾ(34),ಅಶ್ಮಿತಾ(34) ಎಂದು ಗುರುತಿಸಲಾಗಿದೆ.

ಮುಚೂರು ಕಡೆಯಿಂದ ಕೆಂಪು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ಅತಿ ವೇಗ ಹಾಗೂ ಆಜಾಗರೂಕತೆ ಚಾಲನೆಯಿಂದ ನಿಯಂತ್ರಣ ತಪ್ಪಿ ಏಕಾಏಕಿ ತೀರ ಬಲಬದಿ ಚಲಿಸಿ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಘಟನೆ ಕಿನ್ನಿಗೋಳಿ ಸಮೀಪದ ಹೊಸಕಾವೇರಿಯಲ್ಲಿ ನಡೆದಿದೆ. ಕಿನ್ನಿಗೋಳಿ ಕಡೆಯಿಂದ ಮೂಲ್ಕಿ ಕಡೆಗೆ ಸಂಚರಿಸುತ್ತಿದ್ದ ಲಾರಿಯ ಹೊಸಕಾವೇರಿ ಬಳಿ ಅಗಲ ಕಿರಿದಾದ ರಸ್ತೆಯಲ್ಲಿ ಮತ್ತೊಂದು ವಾಹನಕ್ಕೆ ಸೈಡ್ ನೀಡಲು ಮುಂಭಾಗದಿಂದ ಬರುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಆಟೋದಲ್ಲಿ ಸಿಲುಕಿಕೊಂಡ ಚಾಲಕ ಸಮೇತ ಪ್ರಯಾಣಿಕರು ಸಿಕ್ಕಿಹಾಕಿಕೊಂಡಿದ್ದು ಸಾರ್ವಜನಿಕರ ಸಹಾಯದಿಂದ ಸಾಹಸ ಪಟ್ಟು ಹೊರಕ್ಕೆ ತೆಗೆಯಲಾಗಿದ್ದು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.

ಕಿನ್ನಿಗೋಳಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಅಪಘಾತದಿಂದ ಕೆಲ ಹೊತ್ತು ರಾಜ್ಯ ಹೆದ್ದಾರಿ ಸಂಚಾರ ಅಸ್ತವ್ಯತಗೊಂಡಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!