December 16, 2025

ಪಡುಬಿದ್ರಿ: ಡ್ರಿಂಕ್ & ಡ್ರೈವ್, ಪ್ರಕರಣ ದಾಖಲು

0
image_editor_output_image-1445202197-1731049661885.jpg

ಪಡುಬಿದ್ರಿ: ವಿದೇಶದಿಂದ ಸ್ವರಾಜ್ಯ ಕೇರಳಕ್ಕಾಗಮಿಸಿ ಮೋಜಿಗಾಗಿ ಉಡುಪಿ, ಮಲ್ಪೆ ಸುತ್ತಾಡಿದ್ದ ಕೊಚ್ಚಿನ ನಿವಾಸಿಗಳಾದ ಧೀರಜ್‌(28) ಹಾಗೂ ಗೌತಮ್‌(30) ಮದ್ಯಪಾನ ಗೈದು ಕಾರು ಚಲಾಯಿಸಿ ಪೊಲೀಸರ ವಶವಾಗಿದ್ದಾರೆ. ಪಡುಬಿದ್ರಿ ಪೊಲೀಸರು ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣವನ್ನೂ ದಾಖಲಿಸಿದ್ದಾರೆ.

ಈ ಇಬ್ಬರೂ ಮಲ್ಪೆಯಿಂದ ಹೊರಟು ಬರುತ್ತಾ ಕೇರಳದತ್ತ ಹೋಗುವ ಧಾವಂತದಲ್ಲಿ ಪಾಂಗಾಳ ಬಳಿ ತಮ್ಮ ಇನೋವಾ ಕಾರನ್ನು ಮಾರುತಿ ಆಲ್ಟೋ ಕಾರಿಗೆ ಢಿಕ್ಕಿ ಹೊಡೆಸಿ ನಿಲ್ಲಿಸದೇ ಪರಾರಿಯಾಗಿದ್ದರು. ಆ ಕೂಡಲೇ ಪೊಲೀಸರ ಮಾಹಿತಿಯನ್ವಯ ಹೆಜಮಾಡಿ ಟೋಲ್‌ಗೇಟ್‌ ಬಳಿ ಟೋಲ್‌ ಸಿಬಂದಿ ಈ ಕಾರನ್ನು ತಡೆದು ನಿಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!