ಕಾಸರಗೋಡು: ನೀಲೇಶ್ವರ ದೇವಸ್ಥಾನದ ಉತ್ಸವ ವೇಳೆ ಪಟಾಕಿ ಅವಘಡ: ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ
ಕಾಸರಗೋಡು: ನೀಲೇಶ್ವರ ವಿರಾರ್ ಕಾವ್ ದೈವ ಸ್ಥಾನದ ಕಳಿಯಾಟ್ಟಂ ಮಹೋತ್ಸವ ದ ಸಂದರ್ಭದಲ್ಲಿ ನಡೆದ ಸುಡುಮದ್ದು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ.
ಚೆರುವತ್ತೂರಿನ ಶಿಬಿನ್‌ರಾಜ್ ಎಂಬ 19 ವರ್ಷದ ಯುವಕ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಗ ಭಾನುವಾರ ರಾತ್ರಿ ಕೋಝಿಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶಿಬಿನ್ ರಾಜ್ ಚೆನ್ನೈ ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಆಗಿದ್ದರು. ಕಿನಾನೂರಿನ ರತೀಶ್ ಮತ್ತು ನೀಲೇಶ್ವರ ನಿವಾಸಿ ಬಿಜು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಿನಾನೂರಿನ ಚೋಯಂಕೋಡ್‌ನ ಸಂದೀಪ್ ಎಂಬ ಮತ್ತೊಬ್ಬ ವ್ಯಕ್ತಿ ತೀವ್ರ ಸುಟ್ಟಗಾಯಗಳಿಂದ ಶನಿವಾರ ಮೃತಪಟ್ಟಿದ್ದಾರೆ.
ಕಳೆದ ಸೋಮವಾರ ರಾತ್ರಿ ಘಟನೆ ನಡೆದಿತ್ತು. ಸ್ಫೋಟದಲ್ಲಿ 154 ಮಂದಿ ಗಾಯ ಗೊಂಡಿದ್ದರು. ಈ ಪೈಕಿ 8 ಮಂದಿಗೆ ಗಂಭೀರ ಸುಟ್ಟ ಗಾಯಗಾಯಗಳಾಗಿತ್ತು. ಗಾಯಗೊಂಡ 90 ಕ್ಕೂ ಅಧಿಕ ಮಂದಿ ಈಗಲೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




