February 4, 2026

ಉಪಚುನಾವಣಾ ಪ್ರಚಾರದ ವೇಳೆ ಬೈಕ್‌ನಿಂದ ಬಿದ್ದ ನಿಖಿಲ್‌ ಕುಮಾರಸ್ವಾಮಿ

0
image_editor_output_image1563238441-1730634312891.jpg

ರಾಮನಗರ: ಚನ್ನಪಟ್ಟಣ ಉಪಚುನಾವಣಾ ಪ್ರಚಾರದ ವೇಳೆ ಜೆಡಿಎಸ್ ಪಕ್ಷದ ನಾಯಕ ಹಾಗೂ ಮೈತ್ರಿ ಪಕ್ಷಗಳ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರು ಬೈಕ್‌ನಿಂದ ಬಿದ್ದ ಘಟನೆ ಶನಿವಾರ ನಡೆದಿದೆ.

ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿಯಲ್ಲಿ ಕಾರ್ಯಕರ್ತನ ಬೈಕ್ ಮೇಲೆ ಕೂತು ನಿಖಿಲ್ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಮಳೆ ನೀರಿನಿಂದ ಕೆಸರಾಗಿದ್ದ ರಸ್ತೆಯಲ್ಲಿ ಆಯತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಕಾರ್ಯಕರ್ತರು ಕೂಡಲೇ ನಿಖಿಲ್‌ ಅವರ ಸಹಾಯಕ್ಕೆ ಬಂದು ಅವರನ್ನು ಮೇಲಕ್ಕೆತ್ತಿ ಉಪಚರಿಸಿದ್ದಾರೆ. ಘಟನೆಯಲ್ಲಿ ನಿಖಿಲ್ ಅವರ ಬಲಗಾಲಿಗೆ ಪೆಟ್ಟಾಗಿದ್ದರೂ, ನಿಖಿಲ್ ಅವರು ಕೆಲಕಾಲ ವಿಶ್ರಾಂತಿ ಪಡೆದು ನಂತರ ಮತ್ತೆ ಪ್ರಚಾರ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!