ಕನ್ಯಾನ ದುಲ್ಫುಕಾರ್ ಸೇವಾ ಟ್ರಸ್ಟಿಗೆ 2024 25 ನೇ ಸಾಲಿನ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ

ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶವಾದ ಕನ್ಯಾನದಲ್ಲಿ ಕಳೆದ 25 ವರ್ಷಗಳಿಂದ ಬಡ ಮತ್ತು ಅನಾಥರ ಸೇವೆಗೈಯುತ್ತಾ ಶೈಕ್ಷಣಿಕ ಮತ್ತು ಸೇವಾ ರಂಗದಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ದುಲ್ ಫುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ ಇವರಿಗೆ 2024-25 ನೇ ಸಾಲಿನ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಯನ್ನು ಮಂಗಳೂರು ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ನೀಡಿ ಗೌರವಿಸಿದರು
1999-2000 ಇಸವಿಯಲ್ಲಿ ಸಮಾನ ಮನಸ್ಕ ಬೆರಳೆಣಿಕೆಯ ಕೆಲವೊಂದು ಯುವಕರು ಸೇರಿ ಬಡ ಮತ್ತು ನಿರ್ಗತಿಕರಾದ ಕುಟುಂಬಗಳಿಗೆ ಸಹಾಯ ಸಹಕಾರ ನೀಡಲು ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಸಹಾಯ ನೀಡಲು ಸ್ಥಾಪಿಸಿದ ಈ ಸಂಘಟನೆಯು ಇಂದು ಜನಾನುರಾಗಿಯಾಗಿ ಬಹಳ ಹೆಮ್ಮೆಯಿಂದ ಕಾರ್ಯಾಚರಿಸುತ್ತಿದೆ
ಕನ್ಯಾನ ಪರಿಸರದಲ್ಲಿರುವಂತಹ ಬಡವರಿಗೆ ಮದುವೆ’ ಮನೆ ನಿರ್ಮಾಣ ಹೆಣ್ಣು ಮಕ್ಕಳ ಮದುವೆ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಸಾಧ್ಯವಾದ ರೀತಿಯಲ್ಲಿ ಸಹಾಯ ಸಹಕಾರಗಳನ್ನು ನೀಡುತ್ತಿದೆ ಅದೇ ರೀತಿ ಆರೋಗ್ಯ ಹಾಗೂ ಸೇವಾ ರಂಗದಲ್ಲಿ ಹೆಚ್ಚಿನ ಸಹಕಾರವನ್ನು ಕೂಡ ನೀಡುತ್ತಾ ಬರುತ್ತಿದೆ
ಗ್ರಾಮೀಣ ಭಾಗದಲ್ಲಿ ಇಂತಹ ಉದಾತ ಸೇವೆ ನೀಡುತ್ತಿರುವಂತಹ ಈ ಸಂಘಟನೆಯನ್ನು ಊರಿನ ನಾಗರಿಕರು ಮುಕ್ತ ಕಂಟದಿಂದ ಪ್ರಶಂಸಿಸುದ್ದಾರೆ
ಸುಮಾರು 400 ಸದಸ್ಯರನ್ನು ಒಳಗೊಂಡಂತಹ ಈ ಸಂಘಟನೆಯು ಇಂದು ವಿದೇಶದಲ್ಲಿ ದುಲ್ಪುಕಾರ್ ಗಲ್ಫ್ ಕಮಿಟಿ ಎಂಬ ಹೆಸರಿನಲ್ಲಿಯೂ ಕಾರ್ಯಾಚರಿಸುತ್ತಿದೆ
ಪ್ರಸ್ತುತ ಸಾಲಿನಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಲಿರುವ ಸಂಘಟನೆಯು ಹಲವಾರು ಸೇವಾ ಹಾಗೂ ಸಾಮಾಜಿಕ ಯೋಜನೆಗಳನ್ನು ಒಳಗೊಂಡಿರುತ್ತದೆ