ಬಿಯರ್ ಬಾಟಲ್ ನಲ್ಲಿ ಹಲ್ಲಿ ಪತ್ತೆ
ತೆಲಂಗಾಣ: ಬಿಯರ್ನಲ್ಲಿ ಹಲ್ಲಿ ಇರುವುದನ್ನು ಕಂಡು ಆ ಗ್ರಾಹಕ ಫುಲ್ ಶಾಕ್ ಆಗಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಈ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದ್ದು, ಗ್ರಾಹಕರೊಬ್ಬರು ವೈನ್ಶಾಪ್ನಿಂದ ಖರೀದಿಸಿದ ಬಡ್ವೈಸರ್ ಬಿಯರ್ ಬಾಟಲ್ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಈ ಅಚ್ಚರಿಯ ಘಟನೆ ಸುರಕ್ಷತೆ ಮತ್ತು ನೈರ್ಮದ್ಯದ ಬಗ್ಗೆ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ವರದಿಗಳ ಪ್ರಕಾರ ವಿಕಾರಾಬಾದ್ ಕೆರಳ್ಳಿ ಗ್ರಾಮದ ಲಕ್ಷ್ಮೀಕಾಂತ್ ರೆಡ್ಡಿ ಮತ್ತು ಅನಂತಯ್ಯ ಎಂಬ ಇಬ್ಬರು ವ್ಯಕ್ತಿಗಳು ಪಾರ್ಟಿಯ ಸಲುವಾಗಿ ಧಾರೂರಿನ ವೈನ್ ಶಾಪ್ನಿಂದ ಸುಮಾರು 4,000 ರೂಪಾಯಿ ಮೌಲ್ಯದ ಮದ್ಯವನ್ನು ಖರೀದಿಸಿದ್ದರು. ಹೀಗೆ ಎಣ್ಣೆ ಪಾರ್ಟಿಯಲ್ಲಿ ಬಡ್ ವೈಸರ್ ಬಿಯರ್ ಬಾಟಲ್ ಓಪನ್ ಮಾಡಿದಾಗ ಅದರಲ್ಲಿ ಸತ್ತ ಹಲ್ಲಿಯೊಂದು ತೇಳುವುದು ಪತ್ತೆಯಾಗಿದೆ. ಈ ದೃಶ್ಯ ಕಂಡು ಶಾಕ್ ಆಗಿದ್ದಾರೆ. ಕೂಡಲೇ ಮದ್ಯ ಖರೀದಿಸಿದ ಆ ಇಬ್ಬರು ವ್ಯಕ್ತಿಗಳು ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯ ಬಗ್ಗೆ ದೂರು ದಾಖಲಿಸಿದ್ದಾರೆ.