February 4, 2026

DJ ಸೆಟ್ ರಿಪೇರಿ ಮಾಡಲು ಹಣ ನೀಡದ ತಾಯಿಯನ್ನೇ ಕೊಲೆಗೈದ ಪುತ್ರ

0
image_editor_output_image1383381995-1729933669330.jpg

ನವದೆಹಲಿ: ಗಾಜಿಯಾಬಾದ್‌ನಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾದ ಸುಮಾರು ಮೂರು ವಾರಗಳ ನಂತರ, ಆಕೆಯ ಮಗ ಮತ್ತು ಆತನ ಇಬ್ಬರು ಸ್ನೇಹಿತರನ್ನು ಕೊಲೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಹತ್ಯೆಗೀಡಾದ ಮಹಿಳೆಯನ್ನು ಸಂಗೀತಾ ತ್ಯಾಗಿ (47) ಎಂದು ಗುರುತಿಸಲಾಗಿದೆ. ಮಹಿಳೆಯ ಮೃತದೇಹ ಅ.4 ರಂದು ಬೆಳಿಗ್ಗೆ ಗಾಜಿಯಾಬಾದ್‌ನ ಟ್ರೋನಿಕಾ ಸಿಟಿ ಪ್ರದೇಶದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಕೊಲೆಯಾದ ಮಹಿಳೆಯ ಪುತ್ರ ಸುಧೀರ್‌ ಹಾಗೂ ಆತನ ಇಬ್ಬರು ಸ್ನೇಹಿತರಾದ ಅಂಕಿತ್ ಮತ್ತು ಸಚಿನ್ ಎಂಬವರನ್ನು ಬಂಧಿಸಿದ್ದಾರೆ.

ಸುಧೀರ್ ಡಿಜೆ ಮಿಕ್ಸರ್ ರಿಪೇರಿ ಮಾಡಲು ತಾಯಿಯ ಬಳಿ 20,000 ರೂ. ಹಣ ಕೇಳಿದ್ದ. ಆದರೆ ಮಹಿಳೆ ಹಣ ನೀಡಲು ನಿರಾಕರಿಸಿದ್ದಳು. ಇದೇ ಕಾರಣಕ್ಕೆ ಆಕೆಯ ಮಗ ಮತ್ತು ಆತನ ಸ್ನೇಹಿತರು ಸೇರಿಕೊಂಡು ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!