ಕುಂದಾಪುರ: ಬೀಜಾಡಿ ಬೀಚ್ ನಲ್ಲಿ ಈಜಲು ತೆರಳಿದ್ದ ಇಬ್ಬರು ಸಮುದ್ರಪಾಲು: ಓರ್ವನ ಮೃತದೇಹ ಪತ್ತೆ, ಮತ್ತೋರ್ವ ನಾಪತ್ತೆ
ಕುಂದಾಪುರ: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಸಮುದ್ರಪಾಲಾಗಿರುವ ಘಟನೆ ಇಂದು ಶನಿವಾರ ಬೆಳಿ್ಗ್ಗೆ ಉಡುಪಿ ಕುಂದಾಪುರದ ಬೀಜಾಡಿ ಬೀಚ್ ನಲ್ಲಿ ಸಂಭವಿಸಿದೆ.
ಸಮುದ್ರಪಾಲಾದವರಲ್ಲಿ ಓರ್ವನ ಮೃತದೇಹ ಪತ್ತೆಯಾಗಿದ್ದು ಇನ್ನೋರ್ವನಿಗಾಗಿ ಹುಡುಕಾಟ ನಡೆಯುತ್ತಿದೆ.ಮೃತನನ್ನು ಕುಂದಾಪುರ ಮೂಲದ ಅಜಯ್ ಎಂದು ಗುರುತಿಸಲಾಗಿದೆ. ಬೆಂಗಳೂರು ದಾಸರಹಳ್ಳಿ ನಿವಾಸಿ ಸಂತೋಷ್ ನೀರುಪಾಲಾಗಿದ್ದು ಈತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.




