ವಿಟ್ಲ- ಪುತ್ತೂರು ರಸ್ತೆಯ ತಿರುವಿನಲ್ಲಿ ಅಪಾಯಕ್ಕೆ ಆಹ್ವಾನಿಸುತ್ತಿರುವ ಮರ!
ವಿಟ್ಲ: ಸಹಸ್ರಾರು ಜನ, ವಾಹನ ಓಡಾಡುವ ವಿಟ್ಲ- ಪುತ್ತೂರು ರಸ್ತೆಗೆ ತಾಗಿಕೊಂಡೇ ಬೃಹತ್ ಮರವೊಂದಿದೆ. ಸಂಪೂರ್ಣವಾಗಿ ರಸ್ತೆಗೆ ಬಾಗಿಕೊಂಡಿರುವ ಮರ ಯಾವುದೇ ಕ್ಷಣ ಉರುಳಿ ಬೀಳುವ ಅಪಾಯವಿದೆ. ಆದರೆ, ಸ್ಥಳೀಯಾಡಳಿತ ಈ ಬಗ್ಗೆ ಯಾವುದೇ ಮುನ್ನೆಚ್ಚರಿಕೆಯನ್ನು ವಹಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಂಗಳಮಂಟಪ ಸಿಪಿಸಿ ಆರ್ ಐ ಗೇಟಿನ ಬಳಿ ಇರುವ ಪ್ರಯಾಣಿಕರ ನಿಲ್ದಾಣದ ಅವಸ್ಥೆಯ ಹೇಳತೀರದು ಆಲದ ಮರ ಮತ್ತು ಎಚ್ ಟಿ ಕರೆಂಟ್ ವೈರ್ ಸ್ವಲ್ಪ ಅಪ್ಪಿ ತಪ್ಪಿ ಬಿದ್ದರೆ ಬೆಳಗಿನ ಹೊತ್ತಿನಲ್ಲಿ ಶಾಲಾ ಮಕ್ಕಳು ಉದ್ಯೋಗಕ್ಕೆ ಹೋಗುವ ಜನರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದನ್ನು ಶೀಘ್ರವಾಗಿ ಸರಿಪಡಿಸಬೇಕಾಗಿ ಮೆಸ್ಕಾಂ ಸಭೆಯಲ್ಲಿ ಪ್ರಸಾದ್ ಶೆಟ್ಟಕಂಟೇನರ್ ಹಾಗೂ ಘನ ವಾಹನಗಳು ಸಂಚರಿಸುವಾಗ ಚಾಚಿಕೊಂಡ ಕೊಂಬೆಗಳು ವಾಹನಗಳಿಗೆ ತಾಗುತ್ತವೆ. ಇಂಥಹುದೇ ಘಟನೆಗಳು ಮರುಕಳಿಸಿದಾಗ ಕೊಂಬೆಗಳು ಉರುಳಿ ಬೀಳುವ ಸಾಧ್ಯತೆಯೂ ಇರುತ್ತದೆ. ಶಾಲಾ ಕಾಲೇಜು ತೆರಳುವ ವಿದ್ಯಾರ್ಥಿಗಳು ಇದೇ ಮರದಡಿಯಲ್ಲಿ ಸಾಗುತ್ತಿರುತ್ತಾರೆ. ಮಕ್ಕಳು ಮಳೆ, ಬಿಸಿಲಿಗೆ ಇದೇ ಮರದಿ ವಿಶ್ರಾಂತಿ ಪಡೆಯುತ್ತಾರೆ.
ಮರದ ಬುಡವು ಬಿರುಕು ಬಿಟ್ಟಿದ್ದು, ಜೋರಾಗಿ ಗಾಳಿ ಬೀಸಿದರೆ ಇಡೀ ಮರವೇ ಬುಡದಿಂದ ಕಿತ್ತುಕೊಂಡು ರಸ್ತೆಗೆ ಬೀಳುವ ಆತಂಕವೂ ಇದೆ. ಅರಣ್ಯ ಇಲಾಖೆ ಎಚ್ಚೆತ್ತು ಕೂಡಲೇ ಅಪಾಯಕಾರಿ ಮರವನ್ನು ತೆರವುಗೊಳಿಸುವಂತೆ ಗ್ರಾಮಸ್ಥರು, ವಾಹನ ಸವಾರರು ಒತ್ತಾಯಿಸಿದ್ದಾರೆ.




