March 18, 2026

ಬಿ.ಸಿ ರೋಡ್: ಹೆದ್ದಾರಿ ಕಾಮಗಾರಿ ಅವಾಂತರ: ಗ್ರೈಂಡರ್ ವಾಹನ ಡಿಕ್ಕಿಯಾಗಿ ಪಾದಚಾರಿಗೆ ಗಾಯ

0
image_editor_output_image1613815778-1729618014729

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುತ್ತಿದ್ದ ಗ್ರೈಂಡರ್ ವಾಹನವೊಂದು ಡಿಕ್ಕಿಯಾಗಿ ಪಾದಚಾರಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ಮೆಲ್ಕಾರ್ ಸಮೀಪದ ಬೋಳಂಗಡಿ ಎಂಬಲ್ಲಿ ನಡೆದಿದೆ.



ಪಾಣೆಮಂಗಳೂರು ಗ್ರಾಮದ ಬೋಳಂಗಡಿ ನಿವಾಸಿ ಪದ್ಮನಾಭ ಶೆಣೈ ( 76) ಎಂಬವರು ಗಾಯಗೊಂಡವರು.

ಬಿಸಿರೋಡು- ಅಡ್ಡ ಹೊಳೆ ವರೆಗೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಕೆ‌ಎನ್.ಆರ್.ಸಿ.ಕಂಪೆನಿ ಗುತ್ತಿಗೆಯ ಮೂಲಕ ಕೆಲಸ ನಿರ್ವಹಿಸುತ್ತಿದೆ.

ಪಾಣೆಮಂಗಳೂರು ಗ್ರಾಮದ ಬೋಳಂಗಡಿ ಎಂಬಲ್ಲಿ ಕಂಪೆನಿಗೆ ಸೇರಿದ ವಾಹನ ಚಾಲಕ ರಾಜಕುಮಾರ ಯಾದವ ಎಂಬಾತ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿಕರಣ ಮಾಡುತ್ತಿದ್ದ TS-36-C -6757 ನೇ ಗ್ರೈಂಡರ್ ವಾಹನವನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆ ನೀಡದೆ ಏಕಾಏಕಿ ಹಿಮ್ಮುಖವಾಗಿ ಮೆಲ್ಕಾರ್ ಕಡೆಯಿಂದ ಬೋಳಂಗಡಿ ಕಡೆಗೆ ಚಲಾಯಿಸಿಕೊಂಡು ಬಂದು, ಮೆಲ್ಕಾರ್ ಕಡೆಯಿಂದ ಬೋಳಂಗಡಿ ‌ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪದ್ಮನಾಭ ಶೆಣೈಯವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದಾನೆ ಎಂದು ಇವರ ತಮ್ಮನ ಮಗ ಗುರುಪ್ರಸಾದ್ ಅವರು ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ‌.

ಘಟನೆಯಿಂದ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿದ್ದು,ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಲವಾರು ಅಪಘಾತ
ಕಾಮಗಾರಿ ಆರಂಭವಾದ ಇಂದಿನವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವ ವೇಳೆ ಅನೇಕ ಅಪಘಾತ ಗಳು ನಡೆದಿದ್ದು ಪ್ರಾಣ ಹಾನಿಯಾದ ಘಟನೆಗಳು ಸಂಭವಿಸಿವೆ.

ಕಂಪೆನಿಯ ಬೇಜಾವಬ್ದಾರಿತನದ ಕಾಮಗಾರಿಯಿಂದ ಅನೇಕ ಜೀವಗಳು ಬಲಿಯಾಗಿವೆ. ಕಂಪೆನಿಯ ಚಾಲಕರು ದುಡುಕುತನದಿಂದ ಚಾಲನೆ ಮಾಡುತ್ತಿರುವುದೇ ಘಟನೆಗೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ.ಅದರೂ ಕಂಪೆನಿ ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಅಮಾಯಕ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಅಕ್ರೋಶ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!