May 11, 2026

ಸುಳ್ಯ: ಬಸ್ ನಲ್ಲಿ ಕರ್ತವ್ಯದಲ್ಲಿದ್ದಾಗ ತೀವ್ರ ಎದೆ ನೋವು: ಹೃದಯಾಘಾತದಿಂದ ಚಾಲಕ ಗುರುಪ್ರಸಾದ್ ಮೃತ್ಯು

0
image_editor_output_image284691270-1728897914925.jpg

ಸುಳ್ಯ: ಬಸ್ ನಲ್ಲಿ ಕರ್ತವ್ಯದಲ್ಲಿದ್ದ ಚಾಲಕ ಹೃದಯಾಘಾತಕ್ಕೆ ಬಲಿ

ಸುಳ್ಯ: ಸುಳ್ಯ- ತೊಡಿಕಾನ ಖಾಸಗಿ ಅವಿನಾಶ್ ಬಸ್ ನಲ್ಲಿ ಚಾಲಕರಾಗಿ ಆಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸೋಮವಾರ ವರದಿಯಾಗಿದೆ.

ಗುರು ಪ್ರಸಾದ್ ಕುಂಚಡ್ಕ(30 ವರ್ಷ) ಮೃತ ದುರ್ದೈವಿಯಾಗಿದ್ದಾರೆ. ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ.

ತಕ್ಷಣ ಅವರನ್ನು ರಿಕ್ಷಾವೊಂದರಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅರಂಬೂರು ಬಳಿ ಆಟೋ ರಿಕ್ಷಾದಲ್ಲೇ ಪ್ರಾಣ ಬಿಟ್ಟಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!