August 16, 2026

ರೈಲಿನ ಬಾಗಿಲ ಬಳಿ ಡ್ಯಾನ್ಸ್ ಮಾಡುವಾಗ ಕರೆಂಟ್ ಕಂಬಕ್ಕೆ ಢಿಕ್ಕಿ: ವಿದ್ಯಾರ್ಥಿ ಗಂಭೀರ

0
image_editor_output_image928277411-1728898119817.jpg

ಚೆನ್ನೈ: ಚೆನ್ನೈನಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಡ್ಯಾನ್ಸ್ ಮಾಡುವ ವೇಳೆ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿಧ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಾಯಗೊಂಡ ವಿಧ್ಯಾರ್ಥಿಯನ್ನು ಚೆನ್ನೈನ ಮಾಧವರಂ ಪ್ರದೇಶದ 16 ವರ್ಷದ ಅಭಿಲಾಷ್ ಎಂದು ಗುರುತಿಸಲಾಗಿದೆ. ಈತ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ.
ಅಕ್ಟೋಬರ್ 9 ರಂದು, ಸ್ನೇಹಿತರೊಂದಿಗೆ ಪ್ರಯಾಣಿಸುವಾಗ, ಅಭಿಲಾಷ್ ರೈಲಿನ ಫುಟ್‌ಬೋರ್ಡ್‌ನಲ್ಲಿ ನಿಂತು ವಿಡಿಯೋ ಮಾಡಿದ್ದಾನೆ. ಈ ವೇಳೆ ಡ್ಯಾನ್ಸ್ ಮಾಡುತ್ತಾ ರೈಲನ ಹೊರಗೆ ಇಣುಕಿದ್ದು, ಈ ವೇಳೆ ಕಂಬ ಢಿಕ್ಕಿ ಹೊಡೆದಿದೆ.

Leave a Reply

Your email address will not be published. Required fields are marked *

error: Content is protected !!