March 22, 2026

ಬೆಳ್ತಂಗಡಿ: 34 ಕಳ್ಳತನ ಪ್ರಕರಣದ ಆರೋಪಿಯ ಬಂಧನ

0
image_editor_output_image-548499715-1728898586375.jpg

ಬೆಳ್ತಂಗಡಿ: ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಶನಿವಾರ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಹಮೀದ್ ಯಾನೆ ಜಫಾರ್ ಹಮೀದ್ ಹಾನೆ ಕುಂಹಿಮೋನು ಎಂಬಾತನನ್ನು ಪಡಂಗಡಿಯಿಂದ ದಸ್ತಗಿರಿ ಮಾಡಲಾಗಿದೆ.

ಆರೋಪಿಯ ವಿರುದ್ಧ ದ.ಕ. ಜಿಲ್ಲೆಯ ಬಂಟ್ವಾಳ, ಉಪ್ಪಿನಂಗಡಿ, ಕಡಬ, ಪುತ್ತೂರು, ವೇಣೂರು, ಧರ್ಮಸ್ಥಳ, ಪುಂಜಾಲಕಟ್ಟೆ, ಮಂಗಳೂರು ನಗರ, ಬಂದರು ಠಾಣೆ, ಹೊರ ಜಿಲ್ಲೆಗಳಾದ ಹಾಸನದ ಬೇಲೂರು, ಚಿಕ್ಕಮಗಳೂರು ಜಿಲ್ಲೆ, ಕೊಪ್ಪ, ಹರಿಹರಪುರ, ಚಿಕ್ಕಮಗಳೂರು, ಮೂಡಿಗೆರೆ, ಉಡುಪಿ ಜಿಲ್ಲೆ ಪಡುಬಿದ್ರಿ, ಮಡಿಕೇರಿ ಹಾಗೂ ಕೇರಳದಲ್ಲಿ ಸುಮಾರು 34 ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.

Leave a Reply

Your email address will not be published. Required fields are marked *

error: Content is protected !!