May 11, 2026

ಮುಂಡಾಜೆ: ಮನೆ ಮೇಲೆ ಕುಸಿದು ಬಿದ್ದ ಗುಡ್ಡ

0
image_editor_output_image984961348-1728897555968.jpg

ಬೆಳ್ತಂಗಡಿ: ಭಾನುವಾರ ರಾತ್ರಿ ಸುರಿದ ಭಾರೀ ಮಳೆದೆ ಗುಡ್ಡವೊಂದು ಮನೆ ಹಾಗೂ ರಸ್ತೆ ಮೇಲೆ ಕುಸಿದು ಬಿದ್ದ ಘಟನೆ ಮುಂಡಾಜೆಯಲ್ಲಿ ನಡೆದಿದೆ.

ಮುಂಡಾಜೆ ಗ್ರಾಮದ ಪಿಲತ್ತಡ್ಕ ಎಂಬಲ್ಲಿ ವನದುರ್ಗಾ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಶ್ರೀಧರ ಪೂಜಾರಿ ಎಂಬವರ ಮನೆಯ ಸಮೀಪದ ಗುಡ್ಡ ಮಳೆಯ ಅಬ್ಬರಕ್ಕೆ ಕುಸಿದಿದೆ. ಗುಡ್ಡದ ಮಣ್ಣು ರಸ್ತೆಗೆ ಹಾಗೂ ಮನೆಯ ಹಿಂಭಾಗದಲ್ಲಿ ಬಿದ್ದಿದೆ.

ರಸ್ತೆ ಸಂಪೂರ್ಣ ಮುಚ್ಚಿ ಹೋಗಿದ್ದು ಜನರ ಹಾಗೂ ವಾಹನಗಳ ಸಂಚಾರ ಅಸಾಧ್ಯವಾಗಿದೆ. ಮನೆಯ ಹಿಂಭಾಗದಲ್ಲಿಯೂ ಮಣ್ಣು ಬಿದ್ದಿದ್ದು ಅಪಾಯಕಾರಿ ಸ್ಥಿತಿಯಿದೆ.

ಇದೀಗ ಸ್ಥಳೀಯ ಯುವಕರು ರಸ್ತೆಗೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!