ಬ್ರಹ್ಮಾವರ: ಮದರಸ ಹಾಸ್ಟೇಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ
ಬ್ರಹ್ಮಾವರ: ಹೇರಾಡಿ ಖಾಸಗಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಮದರಸ ಹಾಸ್ಟೇಲ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿಯು ಮೊಹಮ್ಮದ್ ಜಹೀದ (12) ಎಂದು ಗುರುತಿಸಲಾಗಿದೆ.
ಕಳೆದ 4 ತಿಂಗಳಿನಿಂದ ಬ್ರಹ್ಮಾವರ ತಾಲೂಕಿನ ರಂಗನಕೆರೆಯ ಮಾಲಿಕ್ ದಿನಾರ್ ಮದರಸ ಹಾಸ್ಟೇಲ್‌ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದು, ರಜೆಯನ್ನು ಮುಗಿಸಿ ಅ.11 ರಂದು ಹಾಸ್ಟೇಲ್‌ಗೆ ಮರಳಿದ್ದಾನೆ.
ರಾತ್ರಿ 9 ಗಂಟೆಗೆ ಊಟಕ್ಕೆ ಬಾರದಿದ್ದನ್ನು ಗಮನಿಸಿ ಹಾಡುಕಿದಾಗ ಹಾಸ್ಟೇಲ್‌ನ ಬಾತ್‌ರೂಮ್‌ನಲ್ಲಿ ಸರಳಿಗೆ ಬೈರಾಸ್‌ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.
ಕೂಡಲೇ ಆತನನ್ನು ಚಿಕಿತ್ಸೆಗಾಗಿ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ವೈದ್ಯರು ರಾತ್ರಿ 10.40 ರ ಸುಮಾರಿಗೆ ಆತನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತನ ಮರಣದಲ್ಲಿ ಸಂಶಯವಿರುವುದಾಗಿ ಬಾಲಕನ ತಾಯಿ ರಿಹಾನ ಬೇಗಂ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕನಿಗೆ ಹಾಸ್ಟೇಲ್‌ಗೆ ಹೋಗಲು ಮನಸ್ಸಿಲ್ಲವೆಂದು, ಹಾಸ್ಟೇಲ್‌ನ ಇತರ ವಿದ್ಯಾರ್ಥಿಗಳೊಂದಿಗೆ ಸಣ್ನ ಮಟ್ಟಿನ ಜಗಳ ಆಗಿತ್ತು ಎಂದು ತಿಳಿದು ಬಂದಿದದೆ.




