February 4, 2026

ಉಡುಪಿ: ನಾಪತ್ತೆಯಾಗಿದ್ದ ಜಲೀಲ್ ಮೃತದೇಹ ನದಿಯಲ್ಲಿ ಪತ್ತೆ

0
image_editor_output_image-1807231799-1728841241405

ಉಡುಪಿ: ನಾಪತ್ತೆಯಾಗಿದ್ದ ಮಲ್ಪೆ ಬಾಪು ತೋಟದ ನಿವಾಸಿ ಜಲೀಲ್(49) ಅವರ ಮೃತದೇಹವು ಪಡುಕೆರೆ ಮಟ್ಟು ಸಮೀಪ ಪಾಪನಾಶಿನಿ ನದಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ.

ಶನಿವಾರ ಬೆಳಿಗ್ಗೆ 5 ಗಂಟೆಗೆ ಜಲೀಲ್ ಅವರು ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಅವರ ಬೈಕ್, ಮೊಬೈಲ್ ಹಾಗೂ ಚಪ್ಪಲಿ ಮಲ್ಪೆ ಪಡುಕರೆ ಸೇತುವೆ ಸಮೀಪ ಪತ್ತೆಯಾಗಿತ್ತು.

ನಂತರ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡವು ಜಲೀಲ್ ನಾಪತ್ತೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಶೇರ್ ಮಾಡಿತ್ತು. ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಪಡುಕರೆ ಬಾಪುತೋಟ ಬಳಿಯ ಪಾಪನಾಶಿನಿ ನದಿಯಲ್ಲಿ ಜಲೀಲ್ ಅವರ ಮೃತದೇಹ ಪತ್ತೆಯಾಗಿದೆ.

ಮೃತದೇಹ ಪತ್ತೆ ಮಾಡಲು ಈಶ್ವರ್ ಮಲ್ಪೆ ಮತ್ತು ತಂಡಕ್ಕೆ ಸ್ಥಳೀಯ ಮೀನುಗಾರರು ಕೂಡ ಸಹಕರಿಸಿದ್ದರು. ಮೃತದೇಹ ಪತ್ತೆಯಾದ ಬಳಿಕ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ತಮ್ಮ ಆಂಬುಲೆನ್ಸ್ ಮೂಲಕ ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಗೆ ರವಾನಿಸಿದರು.

Leave a Reply

Your email address will not be published. Required fields are marked *

error: Content is protected !!