February 2, 2026

ಕೇರಳ: ಮೂರು ಹಕ್ಕಿ ಜ್ವರ ಪ್ರಕರಣಗಳು ವರದಿ:
ಇಂದಿನಿಂದ ಸಾಮೂಹಿಕ ಹತ್ಯೆ ಪ್ರಾರಂಭ

0
birdflunew_1200x768_0_1200x768.jpeg

ಕೇರಳ: ಕೊಟ್ಟಾಯಂ ಜಿಲ್ಲೆಯಲ್ಲಿ ಮೂರು ಹಕ್ಕಿ ಜ್ವರದ ಪ್ರಕರಣ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ವೇಚರ್, ಐಮನಂ ಮತ್ತು ಕಲ್ಲಾರಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಾತುಕೋಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಇಂದಿನಿಂದಲೇ ಸೋಂಕಿತ ಹಕ್ಕಿಗಳನ್ನು ಸಾಮೂಹಿಕವಾಗಿ ಕೊಲ್ಲುವ ಪ್ರಕ್ರಿಯೆ ಪ್ರಾರಂಭವಾಗಲಿದೆ.

ನಿಯಂತ್ರಣ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಡಾ.ಪಿ.ಕೆ.ಜಯಶ್ರೀ ಅವರು ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಭೋಪಾಲ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ (NIHSAD) ನಲ್ಲಿ ಪರೀಕ್ಷೆಗಳನ್ನು ನಡೆಸಲಾಯಿತು. ಕಳೆದ ವಾರ ನೆರೆಯ ಅಲಪ್ಪುಳ ಜಿಲ್ಲೆಯಲ್ಲಿ ಇದೇ ಜ್ವರ ದೃಢಪಟ್ಟಿತ್ತು. ವೈರಸ್‌ನಿಂದ ದೂರವಿರಲು ಬಾತುಕೋಳಿಗಳು ಮತ್ತು ಇತರ ಪಕ್ಷಿಗಳನ್ನು ಕೊಲ್ಲಲಾಯಿತು.

ಹೀಗಾಗಿ ಇಂದಿನಿಂದಲೇ ಸೋಂಕಿತ ಹಕ್ಕಿಗಳನ್ನು ಸಾಮೂಹಿಕವಾಗಿ ಕೊಲ್ಲುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಪಶು ಸಂಗೋಪನಾ ಇಲಾಖೆಯ 10 ಕ್ಷಿಪ್ರ ಪ್ರಕ್ರಿಯಾ ತಂಡಗಳು ಸೇರಿ ಹಕ್ಕಿಗಳನ್ನು ಕೊಲ್ಲಲಿವೆ. ಇನ್ನು ಪ್ರಾಥಮಿಕವಾಗಿ ನಡೆಸಿದ ಮೌಲ್ಯಮಾಪನದ ಪ್ರಕಾರ, ಸದ್ಯದ ಮಟ್ಟಿಗೆ ಹಕ್ಕಿಜ್ವರ ರೋಗವನ್ನು ನಿಯಂತ್ರಣದಲ್ಲಿಡಲು ಏನಿಲ್ಲವೆಂದರೂ 28,500ರಿಂದ 35,000 ಹಕ್ಕಿಗಳನ್ನು ಕೊಲ್ಲಬೇಕಾಗುತ್ತದೆ.

ಆಲಪ್ಪುಳದಲ್ಲಿ ಬಾತುಕೋಳಿಗಳನ್ನು ಕಡಿದು ಸುಟ್ಟು ಹಾಕಲಾಯಿತು. ಕೊಟ್ಟಾಯಂನಲ್ಲಿ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಪ್ರಕರಣಗಳು ದೃಢಪಟ್ಟಿರುವ ಪ್ರದೇಶಗಳಲ್ಲಿ ಹೆಚ್ಚಿನ ಅಪಾಯದ ಪಕ್ಷಿಗಳನ್ನು ನಾಶಪಡಿಸಲು ತಂಡಗಳನ್ನು ನಿಯೋಜಿಸಲಾಗುವುದು.

ಒಂದು ಪಂಚಾಯಿತಿಯಲ್ಲಿ ಆರಂಭದಲ್ಲಿ ಮೂರು ರೈತರ 8,000 ಬಾತುಕೋಳಿಗಳು ಸಾವನ್ನಪ್ಪಿವೆ. ಕೊಟ್ಟಾಯಂನಲ್ಲಿ ಇದೇ ರೀತಿಯ ಪರಿಸ್ಥಿತಿಯನ್ನು ತಪ್ಪಿಸಲು ನಾಗರಿಕ ಮತ್ತು ಜಿಲ್ಲಾಡಳಿತವು ಆಶಿಸುತ್ತಿದೆ. ಮನುಷ್ಯರಿಗೆ ರೋಗ ಹರಡುವ ಸಾಧ್ಯತೆ ಕಡಿಮೆಯಿದ್ದರೂ, ಸೋಂಕು ತಗುಲಿದರೆ ಇನ್ನೂ ಸಮಸ್ಯೆಗಳನ್ನು ಉಂಟುಮಾಡಬಹುದು.

Leave a Reply

Your email address will not be published. Required fields are marked *

error: Content is protected !!