ನಕಲಿ ನೋಟುಗಳನ್ನು ಮುದ್ರಿಸಿ ಬ್ಯಾಂಕ್ ಗೆ ನೀಡಲು ಯತ್ನ: ಪೊಲೀಸರ ಬಲೆಗೆ ಬಿದ್ದ ವಂಚಕರ ಗ್ಯಾಂಗ್
ಬೆಂಗಳೂರು: ಕಂತೆ ಕಂತೆ ನಕಲಿ ನೋಟುಗಳನ್ನು ಮುದ್ರಿಸಿ ಆರ್‌ಬಿಐಗೆ ನೀಡಿ ಟೊಪ್ಪಿ ಹಾಕಲು ಯತ್ನಿಸಿದ ವಂಚಕರ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.
ಬಂಧಿತ ಆರೋಪಿಗಳನ್ನು ಅಬ್ದುಲ್, ಪ್ರಸೀತ್, ಮೊಹಮ್ಮದ್ ಅಫ್ನಾಸ್, ನೂರುದ್ದೀನ್ ಅನ್ವರ್ ಹಾಗೂ ಪ್ರಿಯೇಶ್ ಎಂದು ತಿಳಿದು ಬಂದಿದೆ.
ಆರೋಪಿಗಳು ಹಿಂದಿಯ ವೆಬ್ ಸೀರಿಸ್ ಒಂದರಲ್ಲಿ ನೋಟುಗಳನ್ನ ಮುದ್ರಿಸಿ ವಾಮಮಾರ್ಗದಲ್ಲಿ ಸರಬರಾಜು ಮಾಡುವ ಕತೆಯನ್ನು ಮೀರಿಸುವ ಹಾಗೆ ನಕಲಿ ನೋಟುಗಳನ್ನು ಮುದ್ರಿಸಿ ವಂಚಿಸುತ್ತಿದ್ದರು. ಅಲ್ಲದೇ ನಕಲಿ ನೋಟುಗಳನ್ನು ಆರ್‌ಬಿಐಗೆ ನೀಡಿ ರಾಜಾರೋಷವಾಗಿ ಚಾಲ್ತಿಗೆ ತರಲು ಪ್ರಯತ್ನಿಸಿದ್ದರು.





