February 4, 2026

ಮೂಲ್ಕಿ: ಬಪ್ಪನಾಡು ದೇವಸ್ಥಾನದ ಬಳಿ ಕಾರು ಅಫಘಾತ: ರಸ್ತೆ ಬದಿಯಲ್ಲಿದ್ದ ವ್ಯಕ್ತಿ ಸಾವು

0
image_editor_output_image1979922556-1728451419169.jpg

ಮೂಲ್ಕಿ: ಇಲ್ಲಿನ ಹೆದ್ದಾರಿಯ ಬಪ್ಪನಾಡು ದೇವಸ್ಥಾನದ ಬಳಿ ಸೋಮವಾರ ರಾತ್ರಿ ಸಂಭವಿಸಿದ ಕಾರು ಅಫಘಾತದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಪ್ಪನಾಡು ದೇವಸ್ಥಾನದ ಬಳಿಯ ನಿವಾಸಿ ಸತೀಶ್‌ ಭಂಡಾರಿ (67) ಅವರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸತೀಶ್‌ ಅವರು ಪೇಟೆಗೆ ಹೋಗಿದ್ದವರು ರಸ್ತೆ ಬದಿಯಲ್ಲಿ ನಡೆದುಕೊಂಡು ಮನೆಗೆ ಬರುತ್ತಿದ್ದಾಗ ಮಳೆ, ಸಿಡಿಲು ಬರುತ್ತಿದ್ದು, ಮಾತ್ರವಲ್ಲದೆ ವಿದ್ಯುತ್‌ ಬೇರೆ ಕೈಕೊಟ್ಟಿತ್ತು ಈ ಸಂಧರ್ಭ ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಇವರಿಗೆ ಢಿಕ್ಕಿ ಹೊಡೆದಿತ್ತು.

ತಲೆ ಮತ್ತು ಬೆನ್ನು ಮೂಳೆಗೆ ಗಂಭೀರವಾಗಿ ಗಾಯಗೊಂಡವರನ್ನು ಮುಕ್ಕಾ ಬಳಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರು ಸುಮಾರು ಮೂರೂವರೆ ದಶಕಗಳಿಗೂ ಮಿಕ್ಕಿದ ಕಾಲ ಗಲ್ಪ್ ರಾಷ್ಟ್ರದಲ್ಲಿ ಟೈಲರಿಂಗ್‌ ವೃತ್ತಿ ಮಾಡಿದ್ದರು. ಅವರು ಪತ್ನಿ ಮೂಲ್ಕಿ ನಗರ ಪಂಚಾಯತ್‌ನ ಮಾಜಿ ಉಪಾಧ್ಯಕ್ಷೆ ವಸಂತಿ ಭಂಡಾರಿ ಹಾಗೂ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!