November 22, 2024

ಮಂಗಳೂರು: ಆಗ್ನೆಸ್ ಕಾಲೇಜಿನಉಪನ್ಯಾಸಕನಿಂದ ದ್ವೇಷದ ಉಪನ್ಯಾಸ.! ಅರುಣ್ ಉಳ್ಳಾಲ ವಿರುದ್ದ ಕೇಸ್ ದಾಖಲು

0

ಮಂಗಳೂರು : ಆಗ್ನೆಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ದುಡಿಯುತ್ತಿರುವ ಉಪನ್ಯಾಸಕ ಅರುಣ್ ಉಳ್ಳಾಲ ವಿರುದ್ದ ಮಂಗಳೂರು ಸೆನ್‌ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಉಳ್ಳಾಲದ ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಮಾಡಿದ ದ್ವೇಷದ ಭಾಷಣಕ್ಕೆ ಸಂಬಂಧಿಸಿ ಈ ದೂರು ದಾಖಲಾಗಿದೆ.

ಕಾರ್ಯಕ್ರಮದಲ್ಲಿ ಹಿಂದೂ ಧಾರ್ಮಿಕ ಉಪನ್ಯಾಸ ನೀಡುತ್ತಿದ್ದ ಅರುಣ್ ಉಳ್ಳಾಲ ಅವರು ಕ್ರೈಸ್ತರು ಹಾಗೂ ಮುಸ್ಲಿಂರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. ಹಿಂದೂಗಳು ಹಿಂದೂಗಳಿಗೆ ಸೇರಿದ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ಹಿಂದೂಗಳಿಗೆ ಸೇರಿದ ಹಾಲ್‌ಗಳಲ್ಲೇ ಮದುವೆ ಆಗಬೇಕು ಎಂಬಿತ್ಯಾದಿ ರೀತಿಯ ಮಾತುಗಳನ್ನು ಆಡಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಾರ್ವಜನಿಕವಾಗಿ ತೀವ್ರ ಟೀಕೆಗೆ ಗುರಿಯಾಗಿತ್ತು. ಕ್ರಿಶ್ಚಿಯನ್ ಸಂಸ್ಥೆಯಲ್ಲೇ ವಿದ್ಯಾಭ್ಯಾಸ ಮಾಡಿ, ಕ್ರಿಶ್ಚಿಯನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅರುಣ್ ಉಳ್ಳಾಲ ಅವರ ಈ ಹೇಳಿಕೆ ಎಷ್ಟು ಸರಿ? ಎಂದು ಜನರು ಪ್ರಶ್ನೆ ಮಾಡಿದ್ದರು.  ಅರುಣ್ ಉಳ್ಳಾಲ ಅವರು ಕೆಲಸ ಮಾಡುತ್ತಿರುವ ಆಗ್ನೆಸ್ ಕಾಲೇಜು ಆಡಳಿತ ಮಂಡಳಿ ಇವರನ್ನು ಕೆಲಸದಿಂದ ವಜಾ ಮಾಡಬೇಕೆಂಬ ಒತ್ತಾಯ ಕೂಡ ಮಾಡಲಾಗಿದೆ.  ಇದೀಗ ಅರುಣ್ ಉಳ್ಳಾಲರ ಭಾಷಣ ವಿವಾದವಾಗುತ್ತಿದ್ದಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅರುಣ್ ಉಳ್ಳಾಲ ಅವರ ವಿರುದ್ಧ ಸೆನ್‌ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್‌ ಅರುಣ್ ಗೆ  ಬೆಂಬಲ ಸೂಚಿಸಿದ್ದಾರೆ. ನಾವು ನಿಮ್ಮ ಜೊತೆಗೆ ಇದ್ದೇವೆ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!