May 18, 2026

ಮಂಗಳೂರು: ಮಾದಕ ವಸ್ತುಗಳ ಮಾರಾಟ: ಕೇರಳ ಮೂಲದ ಇಬ್ಬರ ಬಂಧನ

0
image_editor_output_image-1247616449-1728203555566

ಮಂಗಳೂರು: ಮಾದಕ ವಸ್ತು ಎಲ್‌ಎಸ್‌ಡಿ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರನ್ನು ಮೂಲ್ಕಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪ್ರಸ್ತುತ ಹಳೆಯಂಗಡಿ ಬಳಿಯ ಕೊಪ್ಪಳ ಸಮೀಪದಲ್ಲಿ ವಾಸ್ತವ್ಯವಿದ್ದ ಅದಿಲ್ ಮತ್ತು ಮಹಮ್ಮದ್ ನಿಹಾಲ್ ಬಂಧಿತ ಆರೋಪಿಗಳು.

ಬಂಧಿತರು ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದರು. ಈ ಕುರಿತ ಖಚಿತ ಮಾಹಿತಿ ಮೇರೆಗೆ ಮೂಲ್ಕಿ ಪಿಎಸ್‌ಐ ಅನಿತಾ ಎಚ್.ಬಿ. ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಬಂಧಿತ ಆರೋಪಿಗಳಿಂದ ಕಾರು ಹಾಗೂ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಮಂಗಳೂರು ಹೊರವಲಯದ ಕಾಲೇಜೊಂದರ ವಿದ್ಯಾರ್ಥಿಗಳಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!