March 23, 2026

iPhone 16 pro Max ಸರಣಿಯ 26 ಮೊಬೈಲ್‌ ವಶಕ್ಕೆ ಪಡೆದ ಕಸ್ಟಮ್ಸ್‌ ಅಧಿಕಾರಿಗಳು

0
image_editor_output_image-88272125-1727859933856.jpg

ನವದೆಹಲಿ: ಇತ್ತೀಚೆಗೆ ಬಿಡುಗಡೆಯಾಗಿದ್ದ ಐಫೋನ್‌ (iPhone 16 pro Max)16 ಪ್ರೊ ಮ್ಯಾಕ್ಸ್‌ ಸರಣಿಯ ಸುಮಾರು 26 ಮೊಬೈಲ್‌ ಗಳನ್ನು ಮಹಿಳಾ ಪ್ರಯಾಣಿಕಳಿಂದ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಬುಧವಾರ (ಅ.02) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಗೊಂಡಿದ್ದ ಹೈಟೆಕ್‌ ಮೊಬೈಲ್‌ iPhone 16 pro Max ಸರಣಿಯ 26 ಮೊಬೈಲ್‌ ಗಳನ್ನು ಟಿಶ್ಶೂ ಪೇಪರ್‌ ನಲ್ಲಿ ಸುತ್ತಿ ಮಹಿಳೆ ತನ್ನ ವ್ಯಾನಿಟಿ ಬ್ಯಾಗ್‌ ನೊಳಗೆ ಇಟ್ಟುಕೊಂಡಿರುವುದಾಗಿ ವರದಿ ವಿವರಿಸಿದೆ.

Pro Max ಐಫೋನ್‌ 16ರ ಸರಣಿಯ ಟಾಪ್‌ ಮಾಡೆಲ್‌ ಮೊಬೈಲ್‌ ಆಗಿದೆ. ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಹಾಂಗ್‌ ಕಾಂಗ್‌ ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕಳಿಂದ 26 ಐಫೋನ್‌ 16 ಪ್ರೊ ಮ್ಯಾಕ್ಸ್‌ ಅನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!