ಮೂಡುಬಿದಿರೆ: ಸ್ಥಳೀಯ ನಿವಾಸಿಗಳಲ್ಲಿ ಭಯ ಮೂಡಿಸಿದ್ದ ಚಿರತೆ ಬೋನಿನಲ್ಲಿ ಸೆರೆ

ಮೂಡುಬಿದಿರೆ: ಕಲ್ಲಮುಂಡ್ಕೂರು ಸುತ್ತಮುತ್ತ ಹಲವು ದಿನಗಳಿಂದ ಸಂಚರಿಸಿ ಸ್ಥಳೀಯ ನಿವಾಸಿಗಳಲ್ಲಿ ಭಯ ಮೂಡಿಸಿದ್ದ ಚಿರತೆ ಕೊನೆಗೂ ಬೋನಿನಲ್ಲಿ ಸೆರೆಯಾಗಿದೆ.
ಚಿರತೆ ಕಾಣಿಸಿಕೊಂಡ ಬಗ್ಗೆ ಪಂಚಾಯತ್ ಸದಸ್ಯ ವಸಂತ್ ಸೇರಿದಂತೆ ಗ್ರಾಮದ ನಿವಾಸಿಗಳು ಮೂಡುಬಿದಿರೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಪಿ ಶ್ರೀಧರ್ ಮತ್ತು ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ ಅವರು ಕಳಸಬೈಲುನಲ್ಲಿ ಮೂರು ದಿನಗಳ ಹಿಂದೆ ಪಂಜರ ಸ್ಥಾಪನೆಗೆ ನಿರ್ದೇಶನ ನೀಡಿದರು. ಮಂಗಳವಾರ ಚಿರತೆ ಯಶಸ್ವಿಯಾಗಿ ಸೆರೆ ಸಿಕ್ಕಿತ್ತು