March 23, 2026

ಎಲೆ ಅಡಿಕೆ ಕುಟ್ಟುವ ಕಲ್ಲಿನಿಂದ ಹೊಡೆದು ತಾಯಿಯನ್ನೇ ಕೊಂದ ಅಪ್ರಾಪ್ತ ಮಗಳು

0
image_editor_output_image-1823049152-1727507467086.jpg

ಅಸ್ಸಾಂ : ಅಪ್ರಾಪ್ತ ಮಗಳೊಬ್ಬಳು ಹೆತ್ತಮ್ಮನನ್ನೇ ಎಲೆಅಡಿಕೆ ಕುಟ್ಟುವ ಕಲ್ಲಿನಿಂದ (ಕುಟ್ಟಾಣಿ) ಹೊಡೆದು ಕೊಂದ ಆಘಾತಕಾರಿ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ.

ಹೀಗೆ ತಾಯಿಯನ್ನು ಕೊಲೆ ಮಾಡಿದ ಅಪ್ರಾಪ್ತ ಬಾಲಕಿ ಉದಯೋನ್ಮುಖ ಟೆನ್ನಿಸ್ ಪ್ಲೇಯರ್ ಆಗಿದ್ದಳು ಎಂದು ತಿಳಿದು ಬಂದಿದೆ.

ಯುವತಿಯ ತಂದೆ ಟೆನ್ನಿಸ್ ಕೋರ್ಚ ಆಗಿದ್ದು, ಸಂಜೆ ಅವರು ಕೋಚಿಂಗ್ ನೀಡುವುದಕ್ಕಾಗಿ ಡ್ಯೂಟಿಗೆ ತೆರಳಿದ ನಂತರ ಈ ದುರ್ಘಟನೆ ಸಂಭವಿಸಿದೆ. ತಾಯಿ ಮಗಳಿಗೆ ಮಾತಿಗೆ ಮಾತು ಬೆಳೆದು ಅದು ಕೊಲೆಯಲ್ಲಿ ಅಂತ್ಯವಾಗಿದೆ. ಅಪ್ರಾಪ್ತ ಮಗಳು ತನ್ನ 40 ವರ್ಷ ಪ್ರಾಯದ ಹೆತ್ತಬ್ಬೆಯನ್ನು ಕುಟ್ಟಾಣಿಯಿಂದ ಹೊಡೆದು ಸಾಯಿಸಿದ್ದಾಳೆ.

Leave a Reply

Your email address will not be published. Required fields are marked *

error: Content is protected !!