March 23, 2026

ಬಾಡಿಗೆಗಿದ್ದ ಮಹಿಳೆಯ ಮನೆಯ ಬಾತ್‍ರೂಮ್, ಬೆಡ್‍ರೂಮ್‍ನ ಬಲ್ಬ್‍ಗಳಲ್ಲಿ ಹಿಡನ್ ಕ್ಯಾಮೆರಾ: ಆರೋಪಿಯ ಬಂಧನ

0
image_editor_output_image599308695-1727352135916.jpg

ನವದೆಹಲಿ: ಬಾಡಿಗೆಗಿದ್ದ ಮಹಿಳೆಯ ಮನೆಯ ಬಾತ್‍ರೂಮ್ ಮತ್ತು ಬೆಡ್‍ರೂಮ್‍ನ ಬಲ್ಬ್‍ಗಳಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಕರಣ್ ಮನೆ ಮಾಲೀಕನ ಮಗನಾಗಿದ್ದು, ಕಟ್ಟಡದ ಇನ್ನೊಂದು ಮಹಡಿಯಲ್ಲಿ ವಾಸವಾಗಿದ್ದ. ಸಿವಿಲ್ ಸರ್ವೀಸ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಹಿಳೆ ಶಕರ್‍ಪುರದ ಬಾಡಿಗೆಗೆ ಇದ್ದರು.

ಮಹಿಳೆ ಇತ್ತೀಚೆಗೆ ಉತ್ತರ ಪ್ರದೇಶದ ತನ್ನ ಊರಿಗೆ ತೆರಳುವಾಗ ಮನೆಯ ಕೀಯನ್ನು ಅವನ ಬಳಿ ಕೊಟ್ಟು ಹೋಗಿದ್ದಳು. ಈ ವೇಳೆ ಆರೋಪಿ, ಮಹಿಳೆ ವಾಸವಿದ್ದ ಮನೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಅಪೂರ್ವ ಗುಪ್ತಾ ಅವರು, ಮಹಿಳೆ ಇತ್ತೀಚೆಗೆ ತನ್ನ ವಾಟ್ಸಪ್ ಖಾತೆಯಲ್ಲಿ ಕೆಲವು ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದ್ದಳು. ಬಳಿಕ ಆಕೆಯ ವಾಟ್ಸಪ್ ಖಾತೆಯನ್ನು ಬೇರೆ ಲ್ಯಾಪ್‍ಟಾಪ್‍ನಲ್ಲಿ ಬಳಕೆ ಮಾಡುತ್ತಿರುವುದು ತಿಳಿದು ಬಂದಿತ್ತು. ಬಳಿಕ ಆಕೆ ತಕ್ಷಣ ಲಾಗ್ ಔಟ್ ಮಾಡಿದ್ದಳು.

Leave a Reply

Your email address will not be published. Required fields are marked *

error: Content is protected !!