February 3, 2026

ಮಂಗಳೂರು: ನೀರುಮಾರ್ಗ ವ್ಯಕ್ತಿಗೆ ಚೂರಿ ಇರಿತ ಪ್ರಕರಣ:
ಐದು ಮಂದಿಯ ಬಂಧನ

0
n34128306016394891903829c3f7fdacb208b6b5796bf686567214afb98a54ff09c93041a70458f11e30d37.jpg

ಮಂಗಳೂರು: ನಗರದ ಹೊರವಲಯದ ನೀರುಮಾರ್ಗ ಸಮೀಪದ ಪಡು ಪೋಸ್ಟ್ ಆಫೀಸ್ ಬಳಿ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಮೊಹಮ್ಮದ್ ರಿಯಾಜ್ ಎಂಬಾತನ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಗಣೇಶ್, ಚೇತನ್, ಕೀರ್ತಿರಾಜ್, ಸುವಿತ್, ಪರೀಕ್ಷಿತ್ ಎಂದು ಗುರುತಿಸಲಾಗಿದೆ.

ಡಿಸೆಂಬರ್ 10 ರಾತ್ರಿ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೊಂಡಂತಿಲ ಗ್ರಾಮದ ಎಂಬಲ್ಲಿ ಅಡ್ಯಾರ್ ಪದವು ಗ್ರಾಮದ ನಿವಾಸಿಯಾದ ಮೊಹಮ್ಮದ್ ರಿಯಾಜ್ ತಮ್ಮ ಕಾರಿನಲ್ಲಿ ತಮ್ಮ ಮನೆಯ ಕಡೆಗೆ ತೆರಳುತ್ತಿದ್ದರು. ಈ ವೇಳೆ 7ರಿಂದ 8ಜನ ಆರೋಪಿಗಳು ಬೈಕಿನಿಂದ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಮೊಹಮ್ಮದ್ ರಿಯಾಜ್ ನನ್ನು ಕಾರಿನಿಂದ ಎಳೆದು ಹೊರಕ್ಕೆ ತಂದು ಬ್ಯಾಟ್ ರಾಡ್ ಮತ್ತು ಬಿಯರ್ ಬಾಟಲಿಗಳಿಂದ ತಲೆಗೆ ಕಣ್ಣಿಗೆ ಹೊಡೆದು ಪರಾರಿಯಾಗಿದ್ದರು. ಈ ಸಂಬಂಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ 5 ಜನರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಈ ಹಿಂದೆಯೂ ರಿಯಾಝ್ ಹಾಗೂ ಇವರ ಮಧ್ಯೆ ಜಗಳ ನಡೆದಿತ್ತು, ಕಮಿಷನರೆಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ರಿಯಾಜ್ ವಿರುದ್ಧ ಕೆಲ ಪ್ರಕರಣಗಳಲ್ಲಿ ದೂರು ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!