ಉಪ್ಪಿನಂಗಡಿ: ಪಿಎಫ್ಐ ಮುಖಂಡರನ್ನು ಬಿಡುಗಡೆ ಮಾಡುವುದಾಗಿ ಡಿವೈಎಸ್ಪಿ ಭರವಸೆ
ಉಪ್ಪಿನಂಗಡಿ: ವಿಚಾರಣೆ ನೆಪದಲ್ಲಿ ಪಿಎಫ್ಐ ನಾಯಕರನ್ನು ಠಾಣೆಯಲ್ಲಿ ಕೂರಿಸಿದ ಕಾರಣಕ್ಕೆ ಠಾಣೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರನ್ನು ಸಮಾಧಾನಿಸಿದ ಪುತ್ತೂರು ಡಿವೈಎಸ್ಪಿ ಅರ್ಧ ಗಂಟೆಯ ಒಳಗಡೆ ನಾಯಕರನ್ನು ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಈ ಮೇಲಿನ ಭರವಸೆಯನ್ನು ನೀಡಿರುದರಿಂದ ಸದ್ಯ ಬಿಡುಗಡೆಗೊಳಿಸುವ ಸಂದರ್ಭಕ್ಕೆ ಕಾತರದಿಂದ ಕಾರ್ಯಕರ್ತರು ಠಾಣೆಯ ಮುಂದೆ ಕಾಯುತ್ತಿದ್ದರು. ಬಳಿಕ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲಾಗಿದೆ. ಈ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪಿಎಪ್ ಐ ಮುಖಂಡು ನಮ್ಮ ಕಾರ್ಯಕರ್ತರಿಗೆ ಪೊಲೀಸರು ಯಾವುದೇ ಕಿರುಕುಳ ನೀಡದೇ ಬಿಡುಗಡೆ ಮಾಡಿದ್ದಾರೆ. ಎಲ್ಲರೂ ಮಸೀದಿಗೆ ಹೋಗಿ ಬಳಿಕ ಶಾಂತವಾಗಿ ಮನೆಗೆ ತೆರಳಬೇಕು ಎಂದು ಮನವಿ ಮಾಡಿದರು.





