February 3, 2026

ಪುತ್ತೂರು: ನಿದ್ರೆಗೆ ಜಾರಿದ ಚಾಲಕ, ಚರಂಡಿಗೆ ಉರುಳಿದ ಕಾರು

0
image_editor_output_image-1947429860-1726742294984.jpg

ಪುತ್ತೂರು: ಚಾಲಕನ ನಿದ್ರೆ ಮಂಪರಿನಿಂದಾಗಿ ನಿಯಂತ್ರಣ ತಪ್ಪಿ ಓಮ್ಮಿ ಚರಂಡಿಗೆ ಉರುಳಿದ ಘಟನೆ ತಿಂಗಳಾಡಿ ಬಡಕೋಡಿ ರಸ್ತೆಯ ನೆಕ್ಕಿಲು ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಓಮ್ಮಿಯಲ್ಲಿ ಚಾಲಕ ಮಾತ್ರವಿದ್ದು ಯಾವುದೇ ಅಪಾಯಗಳಿಲ್ಲದೇ ಪಾರಾಗಿದ್ದಾರೆ. ಓಮ್ಮಿಯು ತಿಂಗಳಾಡಿಯಿಂದ ರೆಂಜಲಾಡಿಗೆ ತೆರಳುತ್ತಿತ್ತು ಎನ್ನಲಾಗಿದೆ.

ಅಪಘಾತವು ಬೆಳಗಿನ ಜಾವ 7.30ರ ಸುಮಾರಿಗೆ ನಡೆದಿದೆ. ರೆಂಜಲಾಡಿ ನಿವಾಸಿ ರಫೀಕ್ ಎಂಬವರು ಅಪಘಾತಕ್ಕಿಡಾದ ವಾಹನ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.

ನಿದ್ದೆ ಮಂಪರು ಆವರಿಸಿದ್ದರಿಂದ ವಾಹನ ಹತೋಟಿ ಕಳೆದುಕೊಂಡು ರಸ್ತೆಯಿಂದ 1 ಮೀಟರ್ ದೂರದಲ್ಲಿದ ಚರಂಡಿಗೆ ಉರುಳಿದೆ. ವಾಹನ ಉರುಳಿ ಬಿದ್ದ ಸಮೀಪದಲ್ಲಿ ವಿದ್ಯುತ್ ಕಂಬವಿತ್ತು, ಅದಕ್ಕೆ ಢಿಕ್ಕಿ ಹೊಡೆಯುತ್ತಿದ್ದರೇ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.

Leave a Reply

Your email address will not be published. Required fields are marked *

You may have missed

error: Content is protected !!