September 20, 2024

ಬೊಬ್ಬೆಕೇರಿ: ಮುನೀರುಲ್ ಇಸ್ಲಾಂ ಮದ್ರಸಾದಲ್ಲಿ ಮಿಲಾದ್ ಫೆಸ್ಟ್

0

ವಿಟ್ಲ: ಇಲ್ಲಿ ಸಮೀಪದ ಬೊಬ್ಬೆಕೇರಿ ಮುನೀರುಲ್ ಇಸ್ಲಾಂ ಮದರಸದ ಮಿಲಾದ್ ಫೆಸ್ಟ್ 2024 ಅಧ್ಯಕ್ಷ ಬಿ.ಎಂ.ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ದಾವೂದ್ ಹನೀಫಿ ಈದ್ ಮಿಲಾದ್ ನ ಸಂದೇಶ ನೀಡಿದರು.

ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಕೋಶಾಧಿಕಾರಿ ಶರೀಫ್ ಪೊನ್ನೋಟು, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಮಾಜಿ ಅಧ್ಯಕ್ಷ ಶೀತಲ್ ಇಕ್ಬಾಲ್ ಮುಖ್ಯ ಅತಿಥಿಗಳಾಗಿದ್ದರು.

ಶಮೀರ್ ಪಳಿಕೆ, ಬಶೀರ್ ಬೊಬ್ಬೆಕೇರಿ, ಝುಬೈರ್ ಮಾಸ್ಟರ್, ಕಾರ್ಯದರ್ಶಿ ಮಸೂದ್, ಕೋಶಾಧಿಕಾರಿ ಜಲಾಲ್ ಉಪಸ್ಥಿತರಿದ್ದರು. ಸದರ್ ಮುಅಲ್ಲಿಂದ್ ಶಾಹುಲ್ ಹಮೀದ್ ಇರ್ಫಾನಿ ಸ್ವಾಗತಿಸಿ, ವಂದಿಸಿದರು‌. ರಹಿಮಾನ್ ಬೊಬ್ಬೆಕೇರಿ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!