ಚಂದಳಿಕೆ: ಉಸ್ಮಾನಿಯಾ ಮದ್ರಾಸದಲ್ಲಿ ನೆಬಿ ದಿನಾಚರಣೆ
ವಿಟ್ಲ: ಚಂದಳಿಕೆ ಉಸ್ಮಾನಿಯಾ ಮದರಸದಲ್ಲಿ ನೆಬಿ ದಿನಾಚರಣೆಯು ಅಧ್ಯಕ್ಷ ಸಿ.ಇಬ್ರಾಹಿಂ ಚಂದಳಿಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೌಲೂದ್ ಪಾರಾಯಣ, ಮದರಸ ವಿದ್ಯಾರ್ಥಿಗಳಿಂದ ವಿವಿಧ ಪ್ರವಾದಿ ಪ್ರೇಮದ ಹಾಡು, ಬುರ್ದಾ, ಭಾಷಣ ಸ್ಪರ್ಧೆಗಳು ನಡೆದುವು.
ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಖತೀಬ್ ದಾವೂದ್ ಹನೀಫಿ, ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಅಝೀಝ್ ಸನ, ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್, ಹಾಜಿ ಹಕೀಂ ಅರ್ಷದಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಇಕ್ಬಾಲ್ ಶೀತಲ್, ಇಸಾಕ್ ಸಾಹೇಬ್ ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭ ಮದರಸದ ಅಭಿವೃದ್ಧಿಯ ಪ್ರಮುಖರಾದ ಸಿ.ಅಬ್ದುಲ್ ಖಾದರ್, ಅಬ್ದುಲ್ ಹಮೀದ್, ಇಬ್ರಾಹಿಂ ಶೀತಲ್, ಇಕ್ಬಾಲ್ ಒಕ್ಕೆತ್ತೂರು, ಅಹಮದ್ ಬಶೀರ್, ಮುಸ್ತಕ್ ಸಿಪಿಸಿಅರ್‌ಐ, ಅಬ್ದುಲ್ ಸಮದ್ ಮೇಗಿನಪೇಟೆ, ಅಬ್ದುಲ್ ರಹಿಮಾನ್ ಕುರುಂಬಳ ಹಾಗೂ ಸ್ಟಾರ್ ಗೈಸ್ ತಂಡದವರನ್ನು ಸನ್ಮಾನಿಸಲಾಯಿತು.
ಸದರ್ ಉಸ್ತಾದ್ ಅಬ್ಬಾಸ್ ಮದನಿಯವರಿಗೆ ವಾಷಿಂಗ್ ಮೆಷಿನ್ ನ್ನು ಉಡುಗೊರೆಯಾಗಿ ನೀಡಲಾಯಿತು.
ಕಾರ್ಯದರ್ಶಿ ಇಕ್ಬಾಲ್ ಸ್ವಾಗತಿಸಿದರು. ಅಬ್ಬಾಸ್ ಮದನಿ ವಂದಿಸಿದರು.