May 6, 2026

ಕಾಸರಗೋಡು: ಹೆತ್ತ ತಾಯಿಯನ್ನೇ ಕೊಂದ ಮಗ

0
750x450_murder-for-love-jihad-min.jpg

ಕಾಸರಗೋಡು: ಸ್ವಂತ ಮಗನೇ ತಾಯಿಯ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ. ಆದೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಪೊವ್ವಲ್ ಪೆಟ್ರೋಲ್‌ ಪಂಪ್‌ ಬಳಿ ಇಂದು ಸಂಜೆ ವೇಳೆ ನಡೆದಿದೆ.

ಪೊವ್ವಲ್ ಪೆಟ್ರೋಲ್ ಬಂಕ್ ಸಮೀಪದ ಅಬ್ದುಲ್ಲ ಕುಂಞಿ ಅವರ ಪತ್ನಿ ನಬೀಸಾ (62) ಕೊಲೆಯಾದ ಮಹಿಳೆ.

ಮಗ ಸಾಜಿದ್ ಬಂಧಿತ ಆರೋಪಿ. ಸಹೋದರ ಮಜೀದ್ ಹಲ್ಲೆ ತಡೆಯಲು ಯತ್ನಿಸಿದ್ದು ಈ ವೇಳೆ ಗಾಯಗೊಂಡಿದ್ದಾರೆ. ಕೃತ್ಯಕ್ಕೆ ಸಂಬಂಧಪಟ್ಟಂತೆ ತಾಯಿಯನ್ನೇ ಕೊಂದ ಮಗ ಸಾಜಿದ್ ನನ್ನು ಆದೂರು ಠಾಣೆ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!